ಚೇಳ್ಯಾರು ಶಾಲೆಯಲ್ಲಿ ಅದಾನಿ ವಿಲ್ಮಾರ್ ವತಿಯಿಂದ ಯೋಗ ದಿನಾಚರಣೆ

mng--21 june chelyar school
Published on

ಮಂಗಳೂರು: ಚೇಳ್ಯಾರು ಹಿ.ಪ್ರಾ.ಶಾಲೆಯಲ್ಲಿ ಅದಾನಿ ವಿಲ್ಮಾರ್ ವತಿಯಿಂದ ಅದಾನಿ ಫೌಂಡೇಶನ್ ಸಹಯೋಗದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಿಸಲಾಯಿತು.


ಯೋಗ ಶಿಕ್ಷಕಿಯರಾದ ದಿಶಾ ಹಾಗೂ ಶಕುಂತಳಾ ಅವರು ಯೋಗಾಭ್ಯಾಸ ಮಾಡುವುದರ ಜತೆಗೆ ಅದರ ಮಹತ್ವ ತಿಳಿಸಿದರು. ಅದಾನಿ ಸುಪೋಶನ್‌ನ ಅಧಿಕಾರಿ ಡಾ.ಪ್ರೇಮಾ ಡಿಸೋಜ, ಸಹಾಯಕ ಅಧಿಕಾರಿಗಳಾದ ಚೈತ್ರಾ, ರೋಶ್ನಿ, ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಸಹ ಶಿಕ್ಷಕಿಯರಾದ ಸುರೇಖ ಕುಮಾರಿ, ಪುಣಿತ, ಸುಪ್ರಿತಾ, ಸುನಿತಾ, ಪವಿತ್ರ, ಜಯಶ್ರೀ, ಸಹಾಯಕರಾದ ಸುಜಯ, ಪ್ರಿಯಾ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net