Charlie Kirk's Death | ಡೊನಾಲ್ಡ್​​ ಟ್ರಂಪ್​ ಆಪ್ತ ಚಾರ್ಲಿ ಕಿರ್ಕ್ ಹತ್ಯೆ; ಬಂದೂಕು ಸಂಸ್ಕೃತಿಯ ಬಗ್ಗೆ ಪ್ರಶ್ನೆ ಎತ್ತಿದ ಆರ್​ಸಿಬಿ ಮಾಜಿ ನಾಯಕ!

Charlie Kirk's Death
Published on

Charlie Kirk's Death: ಡೊನಾಲ್ಡ್​​ ಟ್ರಂಪ್ ಮಿತ್ರ ಮತ್ತು ಯುವ ರಿಪಬ್ಲಿಕನ್ ಮತದಾರರನ್ನು ಒಟ್ಟುಗೂಡಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆಂದು ಹೇಳಲಾಗುವ ಸಂಪ್ರದಾಯವಾದಿ ಕಾರ್ಯಕರ್ತ ಚಾರ್ಲಿ ಕಿರ್ಕ್ ಅವರನ್ನು ಉತಾಹ್ ಕಾಲೇಜಿನ ಕಾರ್ಯಕ್ರಮದಲ್ಲಿ ಅತಿಥಿ ಭಾಷಣಕಾರರಾಗಿ ಮಾತನಾಡುವಾಗ ಹತ್ಯೆ ಮಾಡಲಾಗಿದೆ.

ಜಾಗತಿಕವಾಗಿ ರಾಜಕೀಯ ವಲಯ ಕಿರ್ಕ್ ಹತ್ಯೆಯನ್ನು ಖಂಡಿಸುತ್ತಿದ್ದಂತೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಬಂದೂಕು ಸಂಸ್ಕೃತಿಯ ಏರಿಕೆಯ ಬಗ್ಗೆ ಕೆಲವು ನಿರ್ಣಾಯಕ ಪ್ರಶ್ನೆಗಳನ್ನು ಎತ್ತಲಾಗಿದೆ. ಈ ವಿಷಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರೂ ಆಗಿದ್ದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್ ಕೂಡ ಕಿರ್ಕ್ ಮರಣದ ನಂತರ ಮಿಲಿಯನ್ ಡಾಲರ್ ಪ್ರಶ್ನೆ ಎತ್ತಿದ್ದಾರೆ. ಕಿರ್ಕ್ ಮೇಲೆ ಗುಂಡಿನ ದಾಳಿ ನಡೆಯುವುದಕ್ಕಿಂತ ಕೆಲಹೊತ್ತಿನ ಮುಂಚೆ ಬಂದೂಕು, ಹಿಂಸಾಚಾರದ ಬಗ್ಗೆ ಪ್ರೇಕ್ಷಕರಿಂದ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ವರದಿಯಾಗಿದೆ.

ಪ್ಲೆಸಿಸ್ ಪೋಸ್ಟ್​​..

ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಚಾರ್ಲಿ ಕಿರ್ಕ್. ನನಗೆ ಅಮೆರಿಕವನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಎಲ್ಲರೂ ಕೇವಲ ಬಂದೂಕನ್ನು ಏಕೆ ಹೊಂದಬಹುದು ಎಂದು ಡು ಪ್ಲೆಸಿಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಘಟನೆ ಹಿನ್ನಲೆ

ಉತಾಹ್ ವ್ಯಾಲಿ ವಿಶ್ವವಿದ್ಯಾಲಯವು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಮಡಿರುವ ಅನೇಕ ವಿಡಿಯೋಗಳಲ್ಲಿ "ದಿ ಅಮೇರಿಕನ್ ಕಮ್‌ಬ್ಯಾಕ್" ಮತ್ತು "ಪ್ರೂವ್ ಮಿ ರಾಂಗ್" ಎಂಬ ಘೋಷಣೆಗಳಿಂದ ಅಲಂಕರಿಸಲ್ಪಟ್ಟ ಬಿಳಿ ಟೆಂಟ್‌ನ ಕೆಳಗೆ ಕುಳಿತಿದ್ದ ಕಿರ್ಕ್ ಹ್ಯಾಂಡ್‌ಹೆಲ್ಡ್ ಮೈಕ್ರೊಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ. ಘಟನೆಯ ಹಿನ್ನಲೆ ಇಬ್ಬರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದ್ದು, ಅವರಿಬ್ಬರ ಬಂಧನ ಗುಂಡಿನ ದಾಳಿಗೆ ಸಂಬಂಧಿಸಿಲ್ಲ ಎಂದು ತಿಳಿದುಬಂದಿದೆ.

ಅಮೆರಿಕದ ಅಧ್ಯಕ್ಷ ಟ್ರಂಪ್ ಕೂಡ ಸಾಮಾಜಿಕ ಜಾಲತಾಣದ ಮೂಲಕ ಈ ಹತ್ಯೆಯನ್ನು ಖಂಡಿಸಿದ್ದು, ಕಿರ್ಕ್ ಅವರನ್ನು ಸತ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ಪ್ರಾಣ ನೀಡಿದವನು ಎಂದು ಕರೆಯುವ ಮೂಲಕ, ಎಡಪಂಥೀಯರತ್ತ ತಮ್ಮ ಆರೋಪ ಹೊರಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net