

Charlie Kirk Shooter Arrested: ಡೊನಾಲ್ಡ್ ಟ್ರಂಪ್ ಆಪ್ತ ಎನ್ನಲಾದ ಚಾರ್ಲಿ ಕಿರ್ಕ್ರನ್ನು ಗುಂಡಿಕ್ಕಿ ಕೊಂದ ಆರೋಪ ಹೊತ್ತಿರುವ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಸೆ 12) ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್, ಕಾನೂನು ಜಾರಿ ಸಂಸ್ಥೆಗಳು ಶಂಕಿತನನ್ನು ಬಂಧಿಸಿದ್ದು, ಉನ್ನತ ಮಟ್ಟದ ಖಚಿತತೆಯ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಬುಧವಾರ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಕಿರ್ಕ್ ಮೇಲೆ ಗುಂಡು ಹಾರಿಸಲಾಯಿತು. ಹಗಲಲ್ಲೇ ಈ ಹತ್ಯೆ ನಡೆದಿದ್ದು, ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಕಿರ್ಕ್ ಹಿಂಸಾಚಾರದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಗಾಳಿಯಿಂದ ಗುಂಡು ಹಾರಿರುವುದು ಹಲವಾರು ವಿಡಿಯೋಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಕ್ಲಿಪ್‌ಗಳಲ್ಲಿ, ಕಿರ್ಕ್ ತಮ್ಮ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡಿರುವುದನ್ನು, ಗಾಯದಿಂದ ರಕ್ತ ಹರಿಯುವುದನ್ನು ಮತ್ತು ಭಯಭೀತರಾದ ಪ್ರೇಕ್ಷಕರು ಓಡಿಹೋಗುವಾಗ ಕುಸಿದು ಬೀಳುವುದನ್ನು ತೋರಿಸುತ್ತವೆ.
ತನಿಖಾಧಿಕಾರಿಗಳ ಪ್ರಕಾರ ಗುಂಡು ಹಾರಿಸಿದ ವ್ಯಕ್ತಿ ಹತ್ತಿರದ ಕಟ್ಟಡದ ಮೇಲ್ಛಾವಣಿಯಿಂದ ಒಂದು ಸುತ್ತು ಗುಂಡು ಹಾರಿಸಿದ್ದಾನೆ, ನಂತರ ಅಧಿಕಾರಿಗಳು ಅದನ್ನು ಮೌಸರ್ 30-06 ಬೋಲ್ಟ್-ಆಕ್ಷನ್ ರೈಫಲ್ ಎಂದು ಗುರುತಿಸಿದ್ದಾರೆ. ಕ್ಯಾಂಪಸ್ ಕಾರ್ ಪಾರ್ಕ್ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಘಟನೆಗೆ ಬಳಸಲಾದ ಗನ್ ವಶಪಡಿಸಿಕೊಳ್ಳಲಾಗಿದೆ ಏಂದು ತಿಳಿದುಬಂದಿದೆ.
ಎಫ್‌ಬಿಐ ಬಿಡುಗಡೆ ಮಾಡಿದ ದೃಶ್ಯಗಳಲ್ಲಿ ಇಪ್ಪತ್ತರ ಅಥವಾ ಮೂವತ್ತರ ದಶಕದ ಆರಂಭದಲ್ಲಿದ್ದ ವ್ಯಕ್ತಿಯೊಬ್ಬ ಕಾನ್ವರ್ಸ್ ಶೂಗಳು, ಕಪ್ಪು ಬೇಸ್‌ಬಾಲ್ ಕ್ಯಾಪ್, ಕಪ್ಪು ಸನ್ಗ್ಲಾಸ್ ಮತ್ತು ಅಮೆರಿಕನ್ ಧ್ವಜದ ವಿಶಿಷ್ಟ ಲಕ್ಷಣವಿರುವ ಉದ್ದ ತೋಳಿನ ಶರ್ಟ್ ಧರಿಸಿರುವುದನ್ನು ತೋರಿಸಲಾಗಿದೆ. ವೀಡಿಯೊದಲ್ಲಿ ಶಂಕಿತನು ವಸತಿ ಪ್ರದೇಶಕ್ಕೆ ಕಣ್ಮರೆಯಾಗುವ ಮೊದಲು ಮೇಲ್ಛಾವಣಿಯ ಮೇಲೆ ವೇಗವಾಗಿ ಚಲಿಸುತ್ತಿರುವುದನ್ನು ಕಾಣಬಹುದು.(ಏಜೆನ್ಸೀಸ್)