ನಾಡು ಕಂಡ ಶ್ರೇಷ್ಠ ಕವಿ ಚನ್ನವಿರ ಕಣವಿ: ಪೊ. ಎಸ್​.ಜಿ.ಸಿದ್ದರಾಮಯ್ಯ ಅಭಿಮತ

Sudhee_07_HS_Venkatesh_Murthy_80_@_BP_Wadia-2
Published on

ಬೆಂಗಳೂರು: ಎಲ್ಲ ಸಂಸತಿಗಳ ತತ್ವ ಸಿದ್ಧಾಂತಗಳ ಸಾರವನ್ನು ಹೀರಿಕೊಂಡು ತಮ್ಮ ಕಾವ್ಯಗಳಲ್ಲಿ ಒಡಮೂಡಿಸಿರುವ ಕೀರ್ತಿ ಚನ್ನವಿರ ಕಣವಿಗೆ ಸಲ್ಲುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪೊ.ಎಸ್​.ಜಿ. ಸಿದ್ಧರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಭಾನುವಾರ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ. ಎಚ್​.ಎಸ್​. ವೆಂಕಟೇಶಮೂರ್ತಿ- 80 ಅಭಿನಂದನೆ ಹಾಗೂ "ಕಾವ್ಯ ಪಾರಿಜಾತ' ಸಮನ್ವಯ ಕವಿ ಚನ್ನವಿರ ಕಣವಿ- ಗೀತ ಗೌರವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಣವಿ ಅವರ ಒಟ್ಟಾರೆ ಸಾಹಿತ್ಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರು ಯಾವುದಕ್ಕೂ ಕಟ್ಟು ಬಿದ್ದವರಲ್ಲ ಎಂಬುದು ತಿಳಿಯುತ್ತದೆ. ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ, ಸಮನ್ವಯ ಕವಿಗಳಲ್ಲಿ ಒಬ್ಬರಾದ ಚನ್ನವಿರ ಕಣವಿಗೆ ಜ್ಷಾನಪೀಠ ಪ್ರಶಸ್ತಿ ದೊರೆಯಬೇಕಿತ್ತು.ಆದರೂ ಅವರು ಈ ಪ್ರಶಸ್ತಿಯಿಂದ ವಂಚಿತರಾದರು ಎಂಬುದನ್ನು ಮರೆಯುವಂತಿಲ್ಲ ಎಂದರು.

ಕನ್ನಡ ಸಾಹಿತ್ಯ ಇಂದಿನವರೆಗೂ ಸಮೃದ್ಧವಾಗಿ ಬೆಳೆಯುತ್ತ ಬಂದಿದೆ ಎಂದರೆ ಅದಕ್ಕೆ ನಮ್ಮ ಕವಿ ಮಹಾಶಯರ ಅಪಾರ ಕೊಡುಗೆ ಕಾರಣ. ನವೋದಯ ಸಾಹಿತ್ಯ ಕಾಲದಲ್ಲಿ ಬಂದಂತಹ ಭಾವಗೀತೆಗಳು ನಂತರದ ಸಾಹಿತ್ಯ ಪ್ರಕಾರಗಳಲ್ಲಿ ಅಷ್ಟು ಕಾಣಲು ಸಿಗಲಿಲ್ಲ, ಆದರೆ ಎಚ್​.ಎಸ್​. ವೆಂಕಟೇಶಮೂರ್ತಿ, ದೊಡ್ಡರಂಗೇಗೌಡ, ನಿಸಾರ್​ ಅಹಮದ್​ ಸೇರಿ ಇತರ ಸಾಹಿತಿಗಳಲ್ಲಿ ಅತ್ಯುತ್ತಮ ಭಾವಗೀತೆಗಳು ರಚನೆಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಪೊ. ಎಸ್​.ಜಿ. ಸಿದ್ದರಾಮಯ್ಯ ವಿವರಿಸಿದರು. ಪರಿಷತ್ತು ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಹಿರಿಯ ಕವಿ ಬಿ.ಆರ್​. ಲ್ಮಣ್​ರಾವ್​, ಟಿ.ಎನ್​. ಸೀತಾರಾಮ್​, ಟಿ.ಎಸ್​. ನಾಗಭರಣ, ಶ್ರೀನಿವಾಸ್​ ಜಿ. ಕಪ್ಪಣ್ಣ, ಮುದ್ದು ಮೋಹನ್​, ಕಿಕ್ಕೇರಿ ಕೃಷ್ಣಮೂರ್ತಿ ಮತ್ತಿತರರಿದ್ದರು.

ಎಚ್​ಎಸ್​ವಿ ಶೇಷ್ಠ ಕವಿ:

ಎಚ್​.ಎಸ್​. ವೆಂಕಟೇಶ್​ಮೂರ್ತಿ ಕುರಿತು ಮಾತನಾಡುವುದೇ ಒಂದು ಸೊಗಸು. ಅವರ ಬಹುಪಾಲು ಕಾವ್ಯ ವೈಖರಿಯನ್ನು ಗಮನಿಸಿದ್ದಲ್ಲಿ ಯಾವುದೇ ಸಂದರ್ಭದಲ್ಲೂ ಏಳು ಬೀಳುಗಳನ್ನು ಕಾಣಲು ಸಾಧ್ಯವಿಲ್ಲ. ಇವರ ಒಟ್ಟಾರೆ ಸಾಹಿತ್ಯದ ಸಾಧನೆ ಬಗ್ಗೆ ಹೇಳಿದಲ್ಲಿ, ಇವರು ಒಬ್ಬ ಶೇಷ್ಠ ಮಹಾಕವಿ ಕೂಡ ಎಂದು ಸೂಚಿಸಬಹುದು. ಮಲೆಯಾಳಿ ಭಾಷೆಯಲ್ಲಿ ಸಾಹಿತ್ಯ ರಚಿಸುವವರೆಲ್ಲರನ್ನೂ ಕೇರಳದಲ್ಲಿ ಮಹಾಕವಿ ಎಂದು ಕರೆಯುವುದು ವಾಡಿಕೆ. ಆದರೆ, ಕನ್ನಡ ಸಾಹಿತ್ಯದಲ್ಲಿ ಅಂತಹ ಕೆಲವೇ ಕೆಲವರನ್ನು ಮಹಾಕವಿ ಎಂದು ಕರೆಯಲಾಗುತ್ತದೆ ಎಂದು ನಾಟಕಕಾರ ಡಾ. ನಾ. ದಾಮೋದರ ಶೆಟ್ಟಿ ಅಭಿಪ್ರಾಯಪಟ್ಟರು.

ಗಮನ ಸೆಳೆದ ಭಾವಗೀತೆಗಳು:

ಚನ್ನವಿರ ಕಣವಿ ಹಾಗೂ ಎಚ್​.ಎಸ್​. ವೆಂಕಟೇಶ್​ಮೂರ್ತಿ ರಚಿಸಿರುವ ಭಾವಗೀತೆಗಳನ್ನು ಸುಗಮ ಸಂಗೀತ ಗಾಯನದಲ್ಲಿ ಗೀತಗೌರವ ಪೂರ್ವಕವಾಗಿ ಹಾಡಿದ್ದು ಈ ಕಾರ್ಯಕ್ರಮದ ವಿಶೇಷ. "ಎಲೆಗಳು ನೂರಾರು', "ಬಯಸದೆ ನಿನ್ನನ್ನು', "ಚಂದ್ರ ನಿಂಗೆ ಕರುಣೆ ಇರಲಿ', "ಹರಿ ಚರಣಕೆ ನಾ ಶರಣಾದೆ', "ಒಂದು ಮುಂಜಾವಿನಲ್ಲಿ'... ಹೀಗೆ ಹಲವು ಭಾವಗೀತೆಗಳು ನೆರದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net