ಚಂದ್ರಗುತ್ತಿ ಶ್ರೀ ರೇಣುಕಾಂಬ ದೇಗುಲದಲ್ಲಿ ಮುತ್ತೈದೆಯರಿಗೆ ಉಡಿ ತುಂಬಿ ವರ ಮಹಾಲಕ್ಷ್ಮೀ ಹಬ್ಬ ಆಚರಣೆ

25sor7
ಸೊರಬ ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಮುತ್ತೈದೆಯರಿಗೆ ಪ್ರಸಾದ ರೂಪದಲ್ಲಿ ಅರಿಶಿಣ, ಕುಂಕುಮ ಹಾಗೂ ಹಸಿರು ಬಳೆ ನೀಡಿ ಉಡಿ ತುಂಬಲಾಯಿತು.
Published on

ಸೊರಬ: ತಾಲೂಕಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ದೇವಿಗೆ ವಿಶೇಷ ಪೂಜಾ-ಕೈಂಕರ್ಯಗಳು ಜರುಗಿದವು.

ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ವ್ರತದ ಆಚರಣೆ ಅಂಗವಾಗಿ ದೇವಸ್ಥಾನಕ್ಕೆ ಆಗಮಿಸಿದ ಮುತ್ತೈದೆಯರಿಗೆ ಪ್ರಸಾದ ರೂಪದಲ್ಲಿ ಅರಿಶಿಣ, ಕುಂಕುಮ ಹಾಗೂ ಹಸಿರು ಬಳೆ ನೀಡಿ, ಉಡಿ ತುಂಬಲಾಯಿತು. ವಿಶೇಷವಾಗಿ ದೇವಿಯ ದರ್ಶನಕ್ಕೆ ತಾಲೂಕು ಮಾತ್ರವಲ್ಲದೇ ನೆರೆಯ ಶಿಕಾರಿಪುರ, ಹಿರೇಕೆರೂರು, ರಟ್ಟೆಹಳ್ಳಿ, ದಾವಣಗೆರೆ, ರಾಣೆಬೆನ್ನೂರು, ಹಾವೇರಿ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್.ಶಿವಪ್ರಸಾದ್, ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ಸದಸ್ಯೆ ಲಲಿತಾ ಎಂ. ಶೆಟ್ಟಿ, ದೇವಸ್ಥಾನದ ಪ್ರಧಾನ ಅರ್ಚಕ ಅರವಿಂದ್ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net