VIDEO | ಬೀದಿ ನಾಯಿಗೆ ಆಹಾರ ನೀಡುತ್ತಿದ್ದಾಗ ನಡೆಯಿತು ದುರಂತ; ಯುವತಿ ಆಸ್ಪತ್ರೆಗೆ ದಾಖಲು!

Chandigarh woman
Published on

ಚಂಡೀಗಢ: ರಾತ್ರಿ ಹೊತ್ತು ಯುವತಿಯೊಬ್ಬಳು ರಸ್ತೆ ಬದಿ ನಿಂತುಕೊಂಡು ಬೀದಿ ನಾಯಿಗೆ ಆಹಾರ ನೀಡುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ 25 ವರ್ಷದ ತೇಜಸ್ವಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಯುವತಿ ತೇಜಸ್ವಿತಾ ಪ್ರತಿದಿನ ಮಾರುಕಟ್ಟೆಗೆ ತೆರಳಿ, ಆಹಾರ ತರುತ್ತಿದ್ದಳು. ನಂತರ ರಾತ್ರಿ ಹೊತ್ತು ತೆರೆಳಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಳು. ಎಂದಿನಂತೆ ತೇಜಸ್ವಿತಾ ಆಹಾರ ನೀಡುತ್ತಿದ್ದಾ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಪಘಾತದ ತೀವ್ರತೆಗೆ ಯುವತಿಯ ತಲೆಗೆ ಗಂಭೀರ ಗಾಯವಾಗಿದೆ. ಕೂಡಲೇ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಶೀಲಿಸಿದ ವೈದ್ಯರು ತಲೆಗೆ ಹೊಲಿಗೆ ಹಾಕಿದ್ದಾರೆ. ತಲೆಗೆ ಗಂಭೀರ ಗಾಯಗೊಂಡಿದ್ದರೂ ಯುವತಿ ನಮ್ಮೊಂದಿಗೆ ಪ್ರಾಥಮಿಕ ಚಿಕಿತ್ಸೆಯ ನಂತರ ಮಾತನಾಡಿದ್ದಾಳೆ. ಇಂದ್ರಿಯಗಳು ಕೆಲಸ ಮಾಡುತ್ತಿವೆ ಎಂದು ಯುವತಿಯ ಪೋಷಕರು ತಿಳಿಸಿದ್ದಾರೆ.

ಸದ್ಯ ಸಿಸಿಟಿವಿ ದೃಶ್ಯವಳಿಗಳ ಆಧಾರದಲ್ಲಿ ಸಂತ್ರಸ್ತೆಯ ತಂದೆ ಓಜಸ್ವಿ ಕೌಶಲ್, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯುವತಿ ಆರ್ಕಿಟೆಕ್ಟ್ ಪದವೀಧರೆಯಾಗಿದ್ದು, ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net