Sutradhari Movie Review; ಸೀರಿಯಸ್​ ಕೇಸ್​ ಭೇದಿಸುವ ಪೋಲಿ ಪೊಲೀಸ್​

asc
Published on

| ಹರ್ಷವರ್ಧನ್​ ಬ್ಯಾಡನೂರು

ಚಿತ್ರ: ಸೂತ್ರಧಾರಿ

ನಿರ್ದೇಶನ: ಕಿರಣ್​ ಕುಮಾರ್​

ತಾರಾಗಣ: ಚಂದನ್​ ಶೆಟ್ಟಿ, ಅಪೂರ್ವ, ನವರಸನ್​, ಪ್ರಶಾಂತ್​ ನಟನ, ತಬಲಾ ನಾಣಿ, ಸಂಜನಾ ಆನಂದ್​ ಮತ್ತಿತರರು.

"100 ಜನ ಅಪರಾಧಿಗಳಿಗೆ  ಕ್ಶಿಷೆಆಗದಿದ್ರೂ ಪರ್ವಾಗಿಲ್ಲ. ಆದರೆ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಅಂತ ಕಾನೂನು ಹೇಳುತ್ತೆ. ಆದರೆ, 100 ಜನ ನಿರಪರಾಧಿಗಳಿಗೆ ಶಿಕ್ಷೆ ಆದಮೇಲೇ ಒಬ್ಬ ಅಪರಾಧಿಗೆ ಶಿಕ್ಷೆ ಆಗುತ್ತೆ ಅನ್ನೋದು ವಾಸ್ತವ' ಎಂದು ಪೊಲೀಸ್​ ಅಧಿಕಾರಿ ವಿಜಯ್​ (ಚಂದನ್​)ಗೆ ಹೇಳುತ್ತಾನೆ ಕಾನ್ಸ್​ಟೆಬಲ್​ ಕಾಳಿದಾಸ (ನಾಣಿ). ಅದಕ್ಕೆ ಕಾರಣ ಸಾಲು ಸಾಲು ಹೈ ಪ್ರೊೈಲ್​ ವ್ಯಕ್ತಿಗಳ ಅಪಹರಣ ಪ್ರಕರಣ. ಆದರೆ, ಅಲ್ಲೊಂದು ಟ್ವಿಸ್ಟ್​ ಇದೆ. ಅದೇನೆಂದರೆ ಕಿಡ್ನ್ಯಾಪ್​ ಆದವರು ಎರಡು ದಿನಗಳ ನಂತರ ರಿಲೀಸ್​ ಆಗಿ, ಮನೆ ಸೇರಿದ ಎರಡು ತಾಸಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ. ಮೂರು ವರ್ಷಗಳ ಸೇವೆಯಲ್ಲಿ ನಾಲ್ಕು ಬಾರಿ ಟ್ರಾನ್ಸ್​ಫರ್​, 20 ಬಾರಿ ಸಸ್ಪೆಂಡ್​ ಆದ ಕುಖ್ಯಾತಿ ವಿಜಯ್​ದು. ಈ ಸೀರಿಯಲ್​ ಕಿಡ್ನ್ಯಾಪ್​ ಪ್ರಕರಣವನ್ನು ಅನಧಿಕೃತವಾಗಿ ತನಿಖೆ ಮಾಡುವ ಜವಾಬ್ದಾರಿ ವಿಜಯ್​ ಹೆಗಲೇರುತ್ತದೆ. ಆರು ಜನರ ತಂಡ ಕಟ್ಟಿಕೊಂಡು ವಿಜಯ್​ ತನಿಖೆಗೆ ಮಾಡುತ್ತಿರುವಾಗಲೇ ಇನ್ನೂ ಮೂವರು ಇದೇ ರೀತಿ ಕಿಡ್ನ್ಯಾಪ್​ ಆಗುತ್ತಾರೆ. ಹಾಗಾದರೆ ಈ ಸೀರಿಯಲ್​ ಅಪಹರಣಗಳ ಸೂತ್ರಧಾರಿ ಯಾರು? ವಿಜಯ್​ ಈ ಕೇಸ್​ನ ಹೇಗೆ ಭೇದಿಸುತ್ತಾನೆ? ಸಿನಿಮಾ ನೋಡಿ.

ಈ ಹಿಂದೆ "ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರ್ಯಾಪರ್​ ಚಂದನ್​ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರವಿದು. ಪ್ರಾರಂಭದಲ್ಲಿ ಪೋಲಿ ಪೊಲೀಸಪ್ಪನಾಗಿ ಕ್ರಮೇಣ ಸೀರಿಯಸ್​ ಸಿಸಿಬಿ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅವರೇ ಸಂಗೀತ ನೀಡಿರುವ ಹಾಡುಗಳು ಬೆಳ್ಳಿತೆರೆಯಲ್ಲಿ ಅದ್ಧೂರಿಯಾಗಿ ಮೂಡಿಬಂದಿವೆ. ಅದೇ ವೈಭವ ಮಾತಿನ ಭಾಗದಲ್ಲೂ ಇದ್ದಿದ್ದರೆ ಸಿನಿಮಾ ಮತ್ತಷ್ಟು ಕಲರ್​ಫುಲ್​ ಆಗಿರುತ್ತಿತ್ತು. ಚಂದನ್​ ನೀಡಿರುವ ಹಿನ್ನೆಲೆ ಸಂಗೀತವೂ ಹೊಸತನದಿಂದ ಕೂಡಿದೆ. ಗ್ಲಾಮರ್​ ಗೊಂಬೆಯಾಗಿ ಅಪೂರ್ವ ಸೆಳೆದರೆ, ತಬಲಾ ನಾಣಿ ನಗಿಸುವುದರ ಜತೆಗೆ ಗಂಭೀರವಾಗಿಯೂ ಮಿಂಚಿದ್ದಾರೆ. ನವರಸನ್​, ಪ್ರಶಾಂತ್​ ಸೇರಿ ಉಳಿದವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೆಮ್​ ಥ್ರಿಲ್ಲರ್​ಗಳಲ್ಲಿ ಚಿತ್ರಕಥೆ ತುಂಬ ಮುಖ್ಯ. ಪ್ರೇಕ್ಷಕರು ಊಹಿಸಿದಂತೆ ಕಥೆ ನಡೆದುಬಿಟ್ಟರೆ, ಅಲ್ಲಿ ಥ್ರಿಲ್​ ಇರುವುದಿಲ್ಲ. ಆದರೆ, ಆ ವಿಷಯದಲ್ಲಿ "ಸೂತ್ರಧಾರಿ' ಬುದ್ಧಿವಂತಿಕೆ ಉಪಯೋಗಿಸಿದ್ದಾನೆ. ರ್ಟನ್​, ಟ್ವಿಸ್ಟ್​ಗಳ ಮೂಲಕ ಪ್ರೇಕ್ಷಕರನ್ನು ಸೀಟಂಚಲ್ಲಿ ಕೂರಿಸುವಲ್ಲಿ ಸಕ್ಸಸ್​ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net