ಬೆಂಗಳೂರು: ವಿದ್ವಾಂಸರಲ್ಲಿ ಚಾಣಕ್ಯರು ( Chanakya Niti ) ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರ ಅಥವಾ ವಸ್ತುಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ಚಾಣಕ್ಯ ನೀತಿಯಲ್ಲಿ ದಂಪತಿಯ ಸುಂದರ ಸಂಸಾರಕ್ಕೆ ಇರುವ ಸೂತ್ರಗಳ ಕುರಿತಾಗಿ ತಿಳಿಸಿದ್ದಾರೆ.
ಇಬ್ಬರು ಸೇರಿ ನಿರ್ಧಾರ ತೆಗೆದುಕೊಳ್ಳಿ: ಗಂಡ ಮತ್ತು ಹೆಂಡತಿ ಇಬ್ಬರೂ ಒಟ್ಟಾಗಿ ಹಣದ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನೆನಪಿಡಿ. ಉಳಿತಾಯ, ಖರ್ಚು ಮತ್ತು ಹೂಡಿಕೆಯ ಬಗ್ಗೆ ನಿರ್ಧಾರಗಳನ್ನು ಒಟ್ಟಿಗೆ ತೆಗೆದುಕೊಳ್ಳಬೇಕು. ಪರಸ್ಪರರ ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳಿ. ಅಲ್ಲದೆ ಅನಗತ್ಯ ವೆಚ್ಚಗಳನ್ನು ತಪ್ಪಿಸಿ.
ಚಟಗಳು, ವ್ಯಸನವು: ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ತುಂಬಾ ದುರ್ಬಲಗೊಳಿಸುತ್ತದೆ. ಮಾದಕ ವ್ಯಸನಿಗಳ ಬದುಕು ಮತ್ತೆಂದೂ ಹಿಂದಿನಂತೆಯೇ ಇರುವುದಿಲ್ಲ. ಪತಿ-ಪತ್ನಿಯರ ನಡುವಿನ ಸಂಬಂಧವನ್ನು ಮುರಿಯಲು ಮದ್ಯದ ಚಟವೇ ದೊಡ್ಡ ಕಾರಣ ಎಂಬುದು ಹಲವು ಸಮೀಕ್ಷೆಗಳಲ್ಲಿ ಬಹಿರಂಗವಾಗಿದೆ.
ಸುಳ್ಳು- ಸತ್ಯ: ಸುಳ್ಳು ಹೇಳುವ ಈ ಒಂದೇ ಅಭ್ಯಾಸವು ಸಂಬಂಧವನ್ನು ಹಾಳುಮಾಡುತ್ತದೆ. ಯಾವುದೇ ಸಂಬಂಧವು ಸುಳ್ಳಿನ ಮೇಲೆ ದೀರ್ಘಕಾಲ ನಿಲ್ಲುವುದಿಲ್ಲ. ಸಂಬಂಧದಲ್ಲಿ ಸುಳ್ಳುಗಳಿದ್ದರೆ, ಸಂಬಂಧಕ್ಕೆ ಯಾವುದೇ ಅಡಿಪಾಯವಿಲ್ಲ. ಸುಳ್ಳಿನ ಮೇಲೆ ಕಟ್ಟಿಕೊಂಡಿರುವ ಸಂಬಂಧ ಯಾವಾಗ ಬೇಕಾದರೂ ಮುರಿಯಬಹುದು.
ಗೌಪ್ಯತೆ : ದಂಪತಿ ನಡುವಿನ ಸಂಬಂಧದಲ್ಲಿ ಗೌಪ್ಯತೆ ಬಹಳ ಮುಖ್ಯವಾಗಿದೆ. ಪತಿ-ಪತ್ನಿ ತಮ್ಮ ನಡುವಿನ ವಿಷಯಗಳನ್ನು ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಗೆ ರವಾನಿಸಬಾರದು. ಪತಿ ಮತ್ತು ಹೆಂಡತಿಯ ನಡುವಿನ ರಹಸ್ಯಗಳು ಮೂರನೇ ವ್ಯಕ್ತಿಯನ್ನು ತಲುಪಿದರೆ, ಅದು ಸಂಬಂಧದಲ್ಲಿನ ನಂಬಿಕೆಯನ್ನು ನಾಶಪಡಿಸುತ್ತದೆ.
ಗಮನಿಸಿ: ಇವುಗಳನ್ನು ಅನುಸರಿಸುವ ಮೊದಲು ಸಂಬಂಧಿತ ಕ್ಷೇತ್ರದಲ್ಲಿ ತಜ್ಞರ ಸಲಹೆಯನ್ನು ಪಡೆಯಲು ಮರೆಯದಿರಿ