Chanakya Niti: ಚಾಣಕ್ಯ ನೀತಿಯ ಪ್ರಕಾರ ಇಂತಹವರಿಗೆ ಹಣವನ್ನು ಅಪ್ಪಿತಪ್ಪಿಯೂ ಕೊಡಬೇಡಿ!

New Project (22)
Published on

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಅವರು ಅನೇಕ ನೀತಿಗಳನ್ನು ರೂಪಿಸಿದರು. ಇಂದು ಅದನ್ನು ನಾವೆಲ್ಲರೂ ಚಾಣಕ್ಯ ನೀತಿ ಎಂದು ಕರೆಯುತ್ತಿದ್ದೇವೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಒಬ್ಬ ವ್ಯಕ್ತಿಯು ಈ ಗುಣಗಳನ್ನು ಹೊಂದಿದ್ದರೆ, ಅವರು ಜೀವನದಲ್ಲಿ ಯಶಸ್ವಿಯಾಗುವುದನ್ನು ಮತ್ತು ಕೆಟ್ಟ ಗುಣಗಳಿಂದ ದುರ್ಬಲವಾಗುವುದನ್ನು ವಿವರಿಸಿದ್ದಾರೆ.

ಚಾಣಕ್ಯ ನೀತಿಯಲ್ಲಿ ಹಣ ನಿರ್ವಹಣೆ (ಅರ್ಥ ನೀತಿ) ಬಗ್ಗೆ ಹಲವು ಮಹತ್ವದ ಶ್ಲೋಕಗಳಿವೆ. ಇವುಗಳು ಹಣದ ಗಳಿಕೆ, ಖರ್ಚು, ಉಳಿತಾಯ, ದಾನ ಮತ್ತು ಸಂತೋಷದ ಬಗ್ಗೆ ಸಲಹೆ ನೀಡುತ್ತವೆ. ಕೆಳಗೆ ಕೆಲವು ಪ್ರಮುಖ ಶ್ಲೋಕಗಳನ್ನು ಸಂಸ್ಕೃತದಲ್ಲಿ, ಅವುಗಳ ಅನುವಾದ ಮತ್ತು ಸಂಕ್ಷಿಪ್ತ ವಿವರಣೆಯೊಂದಿಗೆ ನೀಡಿದ್ದೇನೆ. ಇವುಗಳು ಜೀವನದಲ್ಲಿ ಹಣವನ್ನು ಬುದ್ಧಿಯುತವಾಗಿ ನಿರ್ವಹಿಸುವಂತೆ ಉತ್ತೇಜಿಸುತ್ತವೆ.

ಚಾಣಕ್ಯ ನೀತಿ ಸಾಮಾನ್ಯವಾಗಿ ಹಣದ ನಿರ್ವಹಣೆಯ ಬಗ್ಗೆ ಎಚ್ಚರಿಕೆ ನೀಡುತ್ತದೆ – ಹಣವನ್ನು ಅನಾವಶ್ಯಕವಾಗಿ ಖರ್ಚು ಮಾಡುವುದು ಅಥವಾ ವ್ಯರ್ಥಗೊಳಿಸುವವರಿಗೆ ನೀಡುವುದು ಬಡತನಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತದೆ.

ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯರು ಜೀವನದಲ್ಲಿ ನಿಜವಾದ ಸಂತೋಷವನ್ನು ಪಡೆಯುವುದಕ್ಕೆ ಕೆಲವು ಮುಖ್ಯ ಗುಣಗಳು ಅಥವಾ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ಅವರ ಪ್ರಕಾರ, ಈ ಮೂರು ಜನರಿಗೆ ಹಣ ನೀಡಬಾರದು. ಅಂದರೆ ಈ ಮೂರು ಗುಣಗಳನ್ನು ಹೊಂದಿರುವ ಜನರಿಗೆ ಎಂದಿಗೂ ಹಣ ನೀಡಬಾರದು ಎನ್ನುತ್ತಾರೆ.

ಸೋಮಾರಿಗಳಿಗೆ(ಕೆಲಸ ಮಾಡದವರಿಗೆ), ದುಷ್ಟರಿಗೆ(ಧರ್ಮವನ್ನು ಅರಿಯದವರಿಗೆ) ಮತ್ತು ದುಷ್ಟ ಹೆಣ್ಣು ಮಕ್ಕಳಿಗೆ ನೀಡುವ ಸಪಂತ್ತು ಬೇಗನೆ ವ್ಯರ್ಥ್ಯವಾಗುತ್ತದೆ. ಆದ್ದರಿಂದ ಈ ಕೆಲಸ ತಪ್ಪಾಗಿಯೂ ಮಾಡಬಾರದು ಎಂದು ಚಾಣಕ್ಯ ನೀತಿಯಲ್ಲಿ ಹೇಳುತ್ತಾನೆ.

1.ಸೋಮಾರಿಗಳಿಗೆ ಹಣ ಏಕೆ ನೀಡಬಾರದು?

ಸೋಮಾರಿ ಮಹಿಳೆಯರ ಕೈಯಲ್ಲಿರುವ ಹಣ ಅವಳು ಬುದ್ಧಿವಂತಿಕೆಯಿಂದ ಬಳಸುವುದಿಲ್ಲ. ಅಂತಹ ಯಾವುದೇ ಹಣ ಬೇಗನೆ ಕಳೆದು(ಖರ್ಚು)ಹೋಗುತ್ತದೆ.

2.ಧರ್ಮವನ್ನು ಅರಿಯದವರಿಗೆ

ಧರ್ಮ ಜ್ಞನ ಇಲ್ಲದ ಮಹಿಳಿಗೆ ಹಣ ನೀಡಿದರೆ ಅದು ದುಷ್ಟ ಕಾರ್ಯಗಳಿಗೆ ಬಳಸಿಕೊಳ್ಳಲು ಯತ್ನಿಸುತ್ತಾರೆ. ಇದು ಅನ್ಯಾಯದ ಹಾದಿ. ಹಾಗಾಗಿ, ಇದು ತಪ್ಪು ಎಂದು ಚಾಣಕ್ಯ ಹೇಳುತ್ತಾರೆ.

3.ದುಷ್ಟ ಮಹಿಳೆಗೆ ಹಣ ನೀಡಬಾರದು

ಕೋಪಗೊಂಡ ಮಹಿಳೆಯರಿಗೆ ಹಣ ನೀಡುವುದರಿಂದ ಅತುರದಲ್ಲಿ ಹಣವನ್ನು ತಪ್ಪು ಉದ್ದೇಶಗಳಿಗಾಗಿ ಬಳಸಬಹುದು.(ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net