

Champions Tropy : ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್, ರನ್ ಮಷಿನ್ ವಿರಾಟ್ ಕೊಹ್ಲಿ ಇದೀಗ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆಯುತ್ತಿರುವ ಫೈನಲ್ ಹಣಾಹಣಿಯ ಪಂದ್ಯದಲ್ಲಿ ಆಡುವ ಮೂಲಕ 550 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಇಲ್ಲಿಯವರೆಗೆ ವಿರಾಟ್ ಕೊಹ್ಲಿ, 150 ಟೆಸ್ಟ್, 302 ಏಕದಿನ ಮತ್ತು 125 ಟಿ20 ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಮೂಲಕ ವಿರಾಟ್ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಎರಡನೇ ಆಟಗಾರರಾಗಿ ಹೊರ ಹೊಮ್ಮಿದ್ದಾರೆ. ಅಲ್ಲದೆ, ಇದೇ ಟೂರ್ನಿಯಲ್ಲಿ 14,000 ರನ್ ಪೂರೈಸಿದ ಜಗತ್ತಿನ ಮೂರನೇ ಬ್ಯಾಟರ್ ಎಂಬ ದಾಖಲೆ ಮಾಡಿದ್ದಾರೆ.
2013ರಲ್ಲಿ ನಿವೃತ್ತರಾದ ಕಿಕ್ರೆಟ್ ದಂತ ಸಚಿನ್ ತೆಂಡೂಲ್ಕರ್ 664 ಅಂತರಾಷ್ಟ್ರೀಯ ಪಂದ್ಯಳನ್ನಾಡುವ(200 ಟೆಸ್ಟ್, 463 ಏಕದಿನ ಮತ್ತು ಒಂದಿ ಟಿ20) ಮೂಲಕ ಆಗ್ರಸ್ಥಾನಲ್ಲಿದ್ದಾರೆ. ಇನ್ನು ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ(538), ರಾಹುಲ್ ದ್ರಾವಿಡ್(509) ರೋಹಿತ್ ಶರ್ಮ(499) ಮೊದಲ 5 ಸ್ಥಾನಗಳನ್ನು ಕಾಯ್ದುಕೊಂಡಿದ್ದಾರೆ.
ಇನ್ನುವಿರಾಟ್ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಹಲವಾರು ದಾಖಲೆಗಳನ್ನು ಮರಿಯು ತವಕದಲ್ಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ವೆಸ್ಟ್ ಇಂಡಿಸ್ ಆಟಗಾರ ಕ್ರಿಸ್ಸ್ಗೇಲ್(791) ಅವರನ್ನು ಹಿಂದಿಕ್ಕಲು ಕೇವಲ 46ರನ್ಗಳ ಅಗತ್ಯವಿದೆ.
ನಾಲ್ಕು ಪಂದ್ಯಗಳಲ್ಲಿ 217 ರನ್ ಗಳಿಸಿರುವ ವಿರಾಟ್ ಕೊಹ್ಲಿ, ಪ್ರಸಕ್ತ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಲು ಇನ್ನೂ 46 ರನ್ ಗಳಿಸಬೇಕಾಗಿದೆ. ನ್ಯೂಜಿಲೆಂಡ್‌ನ ರಾಚಿನ್ ರವೀಂದ್ರ ಪ್ರಸ್ತುತ 263 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.(ಏಜೆನ್ಸೀಸ್)