

ಚಾಮರಾಜನಗರ: ನಗರದ ರಾಮಸಮುದ್ರ ಸಮೀಪದ ದೊಡ್ಡಕೆರೆ ಜಲಾನಯನ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗಾಗಿ ಕಾಡಾದಿಂದ 24.71 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಕಾಡಾ ಅಧ್ಯಕ್ಷ ನಿಜಗುಣರಾಜು ಬುಧವಾರ ಬೆಳಗ್ಗೆ ಭೂಮಿ ಪೂಜೆ ನೆರವೇರಿಸಿದರು.
ಈ ಭಾಗದ ರೈತರ ಬಹು ದಿನಗಳ ಬೇಡಿಕೆಯಾಗಿದ್ದ ದೊಡ್ಡಕೆರೆ, ಸಿಂಡಿಕೆರೆ ಚಿಕ್ಕಕೆರೆ ಅಚ್ಚುಕಟ್ಟು ವ್ಯಾಪ್ತಿಯ ರಸ್ತೆಗಳ ಅಭಿವೃದ್ದಿ ಹಾಗೂ ಕೆರೆಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಳೆದ ವರ್ಷದ ಹೆಚ್ಚಿನ ಮಳೆಯಾದ ಹಿನ್ನೆಲೆಯಲ್ಲಿ ಕೆರೆಗಳು ಸಂಪೂರ್ಣವಾಗಿ ತುಂಬಿದ್ದವು. ಆದರೆ ಈ ಭಾಗ ರಸ್ತೆಗಳು ಮಳೆಯಿಂದ ತೀವ್ರ ಶಿಥಿಲಗೊಂಡು ರೈತರು ಜಮೀನುಗಳಿಗೆ ಹೋಗಲು ತೊಂದರೆಯಾಗಿತ್ತು ಎಂದರು.
ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್, ಮುಖಂಡರಾದ ಆರ್. ಪುಟ್ಟಮಲ್ಲಪ್ಪ, ಆರ್.ವಿ.ಮಹದೇವಸ್ವಾಮಿ, ಕೆ.ನಾಗರಾಜು, ಭೃಂಗೇಶ್, ವೇಣುಗೋಪಾಲ್, ಮಹದೇವಸ್ವಾಮಿ, ಮಹೇಶ್, ರಾಜಶೇಖರ್, ನಂದೀಶ್, ಜನಾರ್ಧನಸ್ವಾಮಿ ದೇವಸ್ಥಾನದ ಅರ್ಚಕರಾದ ಅನಂತಪ್ರಸಾದ್ ಇತರರು ಇದ್ದರು.