

ಚಾಮರಾಜನಗರ : ಯುವ ಸಮೂಹ ಶಿಕ್ಷಣ ಪಡೆಯುವುದರೊಂದಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಹೇಳಿದರು.
ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ ಭಗೀರಥ ಪ್ರೀಮಿಯರ್ ಲೀಗ್-ಐಪಿಎಲ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಪ್ರತಿಯೊಬ್ಬರೂ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದರು.
ತೀರ್ಪುಗಾರರು ನಿಷ್ಪಕ್ಷಪಾತವಾದ ತೀರ್ಪು ನೀಡಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಆದರೆ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪಂದ್ಯದ ಆಯೋಜಕ ಮಾರ್ಕೆಟ್ ಅಧ್ಯಕ್ಷ ಕಿಟ್ಟಿ, ಕೆಟಿಆರ್ ಮಹೇಶ್, ರುದ್ರ, ಜವರ, ಸಲೀಂ, ಮಂಜು ಎಂ.ಶೆಟ್ಟಿ, ರಾಹುಲ್, ಪ್ರದೀಪ್, ಪ್ರಕಾಶ್, ಫೈನಾಪಲ್ ಮಂಜು, ಸುವರ್ಣ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದರಾಜು, ತಾಲೂಕು ಅಧ್ಯಕ್ಷ ಶಿವಣ್ಣ, ಚನ್ನಶೆಟ್ಟಿ, ಶ್ರೀನಿವಾಸ್, ಪ್ರಕಾಶ್‌ಜೈನ್, ಮಂಜು, ಶಿವಕುಮಾರ್, ಹರೀಶ್ ಹಾಜರಿದ್ದರು.