

ಮಂಗಳೂರು: ಕಾರಾಗೃಹದೊಳಗೆ ರಸ್ತೆಯಿಂದ ಪೊಟ್ಟಣ ಎಸೆದ ಪ್ರಕರಣದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಆರೋಪಿಗಳ ಕೃತ್ಯದ ವೀಡಿಯೋ ಲಭ್ಯವಾಗಿದ್ದರೂ ಅವರು ಬಂದಿದ್ದ ದ್ವಿಚಕ್ರ ವಾಹನದಲ್ಲಿ ನಂಬರ್ಪ್ಲೇಟ್ ಇರಲಿಲ್ಲ. ಹಾಗಾಗಿ ಪೊಲೀಸರಿಗೆ ಆರೋಪಿಗಳ ಪತ್ತೆ ಸವಾಲಾಗಿದೆ.
ಭಾನುವಾರ ಇಬ್ಬರು ಯುವಕರು ಸ್ಕೂಟರ್ನಲ್ಲಿ ಬಂದು ರಸ್ತೆಯಿಂದ ಕಾರಾಗೃಹದೊಳಗೆ ಪೊಟ್ಟಣವನ್ನು ಎಸೆದು ಪರಾರಿಯಾಗಿದ್ದರು. ಪೊಟ್ಟಣದಲ್ಲಿ ಡ್ರಗ್ಸ್ ಇರಬೇಕೆಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಪೊಟ್ಟಣದಲ್ಲಿ ಸಿಗರೆಟ್, ಮೊಬೈಲ್, ಚಹಾಪುಡಿ ಇತ್ತು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದರು.
ಭದ್ರತೆ ಹೆಚ್ಚಳ
ಪೊಟ್ಟಣ ಎಸೆದ ಘಟನೆಯ ಹಿನ್ನೆಲೆಯಲ್ಲಿ ಕಾರಾಗೃಹದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಖ್ಯವಾಗಿ ಪೊಟ್ಟಣ ಎಸೆದ ಪರಿಸರದಲ್ಲಿ ದಿನದ 24 ಗಂಟೆಯೂ ಹೆಚ್ಚುವರಿ ಪೊಲೀಸ್ ಅಧಿಕಾರಿ, ಸಿಬಂದಿಯನ್ನು ನಿಯೋಜಿಸಿ ನಿಗಾ ವಹಿಸಲಾಗುತ್ತಿದೆ.