ಸಮುದಯ ಇಬ್ಭಾಗ ಮಾಡುವವರ ಬಗ್ಗೆ ಇರಲಿ ಎಚ್ಚರ; ಯಾದವ ಸಮುದಾಯ ಮುಖಂಡರ ಸಲಹೆ

Challakere Golla community meeting
Published on

ಚಳ್ಳಕೆರೆ: ಗೊಲ್ಲ ಸಮುದಾಯವನ್ನು ಇಬ್ಭಾಗ ಮಾಡಲು ಪ್ರಯತ್ನಿಸುವವರ ಬಗ್ಗೆ ಜನರು ಜಾಗೃತರಾಗಬೇಕಿದೆ ಎಂದು ಯಾದವ ಸಮಾಜದ ತಾಲೂಕು ಕಾರ್ಯದರ್ಶಿ ಜೆ.ಕೆ. ವೀರಣ್ಣ ಹೇಳಿದರು.

ಇಲ್ಲಿನ ಯಾದವ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಯಾದವರ ಸಂಘದ ಮುಖಂಡರು ಎಂದು ಹೇಳಿಕೊಳ್ಳುವ ಕೆಲವರು ಸ್ವ ಹಿತಕ್ಕಾಗಿ ಸಮುದಾಯವನ್ನು ಇಬ್ಭಾಗವಾಗಿ ಮಾಡುವ ಕುತಂತ್ರ ಮಾಡುತ್ತಿದ್ದಾರೆ. ತಾಲೂಕು ಹಂತದ ಯಾದವ ಸಂಘದ ವಿಶ್ವಾಸ ಗಳಿಸಿಕೊಳ್ಳದೆ ಜಿಲ್ಲಾ ಕೇಂದ್ರದಲ್ಲಿ ಸಭೆ ನಡೆಸುವುದು ಸಮಾಜ ವಿರೋಧಿ ಆಗುತ್ತದೆ. ರಾಜಕೀಯ ಲಾಭಕ್ಕಾಗಿ ಪ್ರಯತ್ನಿಸುವ ವ್ಯಕ್ತಿಗಳ ಕುರಿತು ಜಾಗೃತವಾಗಬೇಕಾಗಿದೆ ಎಂದು ಹೇಳಿದರು. ಯಾದವ ಸಮಾಜದ ಮುಖಂಡ ಚಿಕ್ಕಣ್ಣ, ಬೆಳಗೆರೆ ಕೆ. ಮಂಜಪ್ಪ, ಚೌಳೂರು ವೀರಭದ್ರಪ್ಪ, ವೀರೇಶ್, ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net