ಬೆಂಗಳೂರು: ( chaitra kundapur ) ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಕಾರ್ಯಕ್ರಮ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಾ ಮುಂದೆ ತಾ ಮುಂದೆ ಎಂದು ಸ್ಪರ್ಧಿಗಳು ಒಂಟಿಮನೆಯಲ್ಲಿ ಸೆಣಸಾಟ ನಡೆಸುತ್ತಿದ್ದಾರೆ.
ಒಬ್ಬರಿಗಿಂದ ಒಬ್ಬರು ವಿಭಿನ್ನವಾಗಿರುವ ಈ ಸ್ಪರ್ಧಿಗಳ ಮಧ್ಯೆ ಚೈತ್ರಾ ಕುಂದಾಪುರ್ ಅವರು ಒಂದು ಹೆಜ್ಜೆ ಮುಂದೆ ಹೋಗಿ I am God… God is great ಕನ್ನಡಿ ಮುಂದೆ ತನಗೆ ತಾನೇ ಪೂಜೆ ಮಾಡಿಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ತನಗೆ ತಾನೇ ಪೂಜೆ ಮಾಡಿಕೊಂಡಿದ್ದು ವಿಶೇಷವಾಗಿದೆ. ದೇವರ ಪಕ್ಕದಲ್ಲಿ ನಿಂತು ಐ ಆ್ಯಮ್ ಗಾಡ್, ಗಾಡ್ ಈಸ್ ಗ್ರೇಟ್ ಅನ್ನೋ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
https://twitter.com/SoansShine/status/1854384951682040044
ಕನ್ನಡಿ ಮುಂದೆ ತನಗೆ ತಾನೇ ಪೂಜೆ ಮಾಡಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರನ್ನು ಶಿಶಿರ್ ನೋಡಿ ಫುಲ್ ಶಾಕ್ ಆಗಿದ್ದಾರೆ. ಚೈತ್ರಾ ಅವರ ವಿಚಿತ್ರ ಪೂಜೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಯಾಕೆ ಈ ಪೂಜೆ? I am God… God is great ಎಂದು ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ.
ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಅವರು ಈಗ ತಮ್ಮ ವರಸೆ ಬದಲಾಯಿಸಿದ್ದಾರೆ. ಪಟ, ಪಟ ಅಂತ ಮಾತನಾಡುತ್ತಿದ್ದ ಚೈತ್ರಾ ಈ ಪೂಜಾ ಶೈಲಿಯ ಕುರಿತಾಗಿ ನೆಟ್ಟಿಗರು ಚರ್ಚೆ ಶುರು ಮಾಡಿದ್ದಾರೆ.
ಅಭಿಷೇಕ್-ಐಶ್ ವಿಚ್ಛೇದನ! ಸೆನ್ಸೇಷನಲ್ ಪೋಸ್ಟ್ ಮಾಡಿ…ತಕ್ಷಣ ಡಿಲೀಟ್ ಮಾಡಿದ ನಟಿ Simi Garewal