

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ (BiggBoss) ಮುಗಿದು ವಾರ ಕಳೆದಿದ್ದು, ಜನರು ಈಗಲೂ ಅದರ ಗುಂಗಿನಲ್ಲಿ ಇದ್ದಾರೆ. ಇನ್ನೂ 11ನೇ ಆವೃತ್ತಿಯಲ್ಲಿ ತಮಾಷೆಯಾಗಿಯೇ ಜಗಳವಾಡಿ ಪ್ರೇಕ್ಷಕರಿಗೆ ಇಷ್ಟವಾಗಿದ್ದ ರಜತ್ ಹಾಗೂ ಚೈತ್ರಾ ಕುಂದಾಪುರ ಜೋಡಿ ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೂ ಕಿತ್ತಾಡಿಕೊಂಡಿದ್ದು, ಈ ವಿಚಾರ ಕಿರುತೆರೆ ಲೋಕದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಬಿಗ್‌ಬಾಸ್ (BiggBoss) ಮನೆಯಲ್ಲಿ ಫೈರ್‌ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿದ್ದ ಚೈತ್ರಾ ಕುಂದಾಪುರ ತಮ್ಮ ಜೋರು ದನಿಯಿಂದಲೇ ಹೆಸರು ಮಾಡಿದ್ದರು. ಇತ್ತ ವೈಲ್ಡ್‌ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಜತ್ ಕೂಡ ಕಡಿಮೆಯೇನಿರಲಿಲ್ಲ. ಇಬ್ಬರೂ ಮಾತಿಗೆ ಮಾತು ಎನ್ನುತ್ತಾ ತೊಡೆ ತಟ್ಟಿ ಎಲ್ಲರಿಗೂ ಗಾಬರಿ ತರಿಸುತ್ತಿದ್ದರು. ಆದರೆ, ಫಿನಾಲೆಗೂ ಮುನ್ನವೇ ಚೈತ್ರಾ ಕುಂದಾಪುರ ಮನೆಯಿಂದ ಎಲಿಮಿನೇಟ್ ಆಗಿದ್ದರು.ಇದೀಗ ಈ ಇಬ್ಬರು ಸ್ಫರ್ಧಿಗಳು ಬಿಗ್ಬಾಸ್ನಿಂದ ಹೊರಬಂದ ಬಳಿಕ ಮತ್ತೊಮ್ಮೆ ಮುಖಾಮುಖಿಯಾಗಿದ್ದು, ಈಗೋ ಬಿಡುವ ಮಾತಿಲ್ಲ ಎಂದು ಪರಸ್ಪರ ಸವಾಲೆಸೆದಿದ್ದಾರೆ.
ರಜತ್ ಹಾಗೂ ಚೈತ್ರಾ ಕಲರ್ಸ್ ವಾಹಿನಿಯಲ್ಲಿ ಹೊಸದಾಗಿ ಪ್ರಸಾರವಾಗುತ್ತಿರುವ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಬಿಗ್ಬಾಸ್ನ ಈ ಇಬ್ಬರು ಮಾಜಿ ಸ್ಫರ್ಧಿಗಳು ಮುಖಾಮುಖಿಯಾಗಿದ್ದು, ರಜತ್‌ಗೆ ಪೇಟ ಹಾಕಿ ಸನ್ಮಾನಿಸುವ ಮೂಲಕ ಚೈತ್ರಾ ಕುಂದಾಪುರ ಅವರು, ರಜತ್‌ಗೆ ಪ್ರೀತಿಯ ಬಾಸ್ ಮಾಡುವ ಸಮಸ್ಕಾರಗಳು ಎಂದು ಕಾಲೆಳೆದಿದ್ದಾರೆ. ಇನ್ನು ಹಾರ ಹಾಕಿದ್ದನ್ನು ಕಂಡು ಇದು ಕುರಿಯನ್ನ ಬಲಿ ಕೊಡಂಗಿದೆ ಎಂದು ರಜತ್‌ಗೆ ಜೋಕ್ ಮಾಡಿದ್ದಾರೆ. ಈ ಶೋನಲ್ಲಿ ಹೇಗೋ ನೆಮ್ಮದಿಯಾಗಿರ್ತಿದ್ದೆ ಎಂದು ರಜತ್ ಹೇಳಿದ್ದು, ಇದಕ್ಕೆ ನೀನು ನೆಮ್ಮದಿಯಾಗಿ ಇರಬಾರ್ದು ಅಂತಾನೇ ನಾನು ಬಂದಿರೋದು ಎಂದು ಚೈತ್ರಾ ಹೇಳಿದ್ದಾರೆ. ಆ ಬಳಿಕ ಇವರಿಬ್ಬರು ಹಾಡೊಂದಕ್ಕೆ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ.
ನಿಮ್ಮ ರಿಲೇಷನ್ಶಿಪ್ನಲ್ಲಿ ಮೊದಲು ಈಗೋ ಬಿಡೋರು ಯಾರು? ಎಂಬ ಶೀರ್ಷಿಕೆಯಡಿ ರಿಲೀಸ್ ಆಗಿರುವ ಪ್ರೋಮೋ ನೋಡುವುದಾದರೆ ಇಬ್ಬರು ಕಿತ್ತಾಡಿಕೊಂಡಿದ್ದು, ಮಾತಿನ ಚಕಮಕಿ ನಡೆದಿದೆ. ಸದ್ಯ ಈ ಪ್ರೋಮೋ ವೈರಲ್ ಆಗಿದ್ದು, ಈ ಇಬ್ಬರು ಪ್ರೇಕ್ಷಕರಿಗೆ ಭರ್ಜರಿ ಮನರೋರಂಜನೆ ನೀಡುವುದು ಖಾತ್ರಿಯಾಗಿದೆ.