ಮೈಸೂರು ಅಥ್ಲೆಟಿಕ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಚೈನ್‌ಸಿಂಗ್ ರಾಜ್ ಪೊರೋಹಿತ್ ಆಯ್ಕೆ

23
Published on

ಮೈಸೂರು: ಮೈಸೂರು ಅಥ್ಲೆಟಿಕ್ಸ್ ಕ್ಲಬ್‌ನ 2025-26ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ವಿಶ್ರಾಂತ ನಿರ್ದೇಶಕ ಡಾ.ಸಿ.ಕೃಷ್ಣ ಪೋಷಕರನ್ನಾಗಿ ಹಾಗೂ ಚೈನ್‌ಸಿಂಗ್ ರಾಜ್ ಪೊರೋಹಿತ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಉಳಿದಂತೆ ಸಿ.ಕೆ.ಮುರಳೀಧರನ್, ಮಹದೇವಯ್ಯ (ಉಪಾಧ್ಯಕ್ಷ), ಎಂ.ಯೋಗೇಂದ್ರ(ಕಾರ್ಯದರ್ಶಿ), ಕೆ.ಗುರುರಾಜ್(ಖಜಾಂಚಿ), ಜಿ.ಆರ್.ಪ್ರಭಾಕರ್(ಸಂಘಟನಾ ಕಾರ್ಯದರ್ಶಿ ಮತ್ತು ತರಬೇತುದಾರ), ಎಚ್.ಆರ್.ರಾಮಸ್ವಾಮಿ, ಕೆ.ಗೋಪಿನಾಥ್(ಜಂಟಿ ಕಾರ್ಯದರ್ಶಿ), ಬಿ.ಕೆ.ರಾಜೇಅರಸ್(ಜಂಟಿ ಸಂಘಟನಾ ಕಾರ್ಯದರ್ಶಿ), ಬಿ.ಶ್ರೀಕಾಂತ್(ಸಾರ್ವಜನಿಕ ಸಂಪರ್ಕಾಧಿಕಾರಿ), ಕೆ.ಬಿ.ಗಂಗಾಧರ್ (ಆರ್ಥಿಕ ಸಲಹೆಗಾರ ಹಾಗೂ ಲೆಕ್ಕ ಪರಿಶೋಧಕ) ಅವರು ಆಯ್ಕೆಯಾಗಿದ್ದಾರೆ ಎಂದು ಎಂ.ಯೋಗೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net