ಕಾರವಾರ: ಉಡುಪಿ ಬ್ರಹ್ಮಾವರ ಬಳಿ ಸರ ಅಪಹರಣ (chain Snatching ) ಮಾಡಿಕೊಂಡು ಪರಾರಿಯಾಗುತ್ತಿದ್ದ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದ ಐದು ಜನನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರದಿಂದ ಉತ್ತರ ಕನ್ನಡ ಪೊಲೀಸ್ ಕಂಟ್ರೋಲ್‌ರೂಂಗೆ ಬಂದ ಮಾಹಿತಿಯನ್ನು ಆಧರಿಸಿ ಅಂಕೋಲಾ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ ಮಠಪತಿ, ಪಿಸ್‌ಐ ಉದ್ದಪ್ಪ ಧರೆಪ್ಪನವರ್, ಎಎಸ್‌ಐ ಲಲಿತಾ ರಜಪೂತ ಹಾಗೂ ಸಿಬ್ಬಂದಿ ಬಾಳೆಗುಳಿಯಲ್ಲಿ ನಾಕಾಬಂಧಿ ಮಾಡಿದ್ದರು.
chain Snatching
ಮಧ್ಯಾಹ್ನ 1.30 ರ ಹೊತ್ತಿಗೆ ಮಹಾರಾಷ್ಟ್ರ ನೋಂದಣಿ ಸ್ವಿಫ್ಟ್ ಕಾರಿನಲ್ಲಿ ಬಂದ ಕಳ್ಳರು ಅಂಕೋಲಾ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಎಲ್ಲ ಸರಗಳ್ಳರನ್ನು ಬ್ರಹ್ಮಾವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: https://www.vijayavani.net/conviction-for-rapist