

ವಿಜಯಪುರ: (SBI Bank ) ಭೀಮಾತೀರದ ಚಡಚಣದಲ್ಲಿರುವ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಚಿನ್ನದ ಬ್ಯಾಗ್ ಪತ್ತೆಯಾಗಿದೆ.
ಸೆ. 16 ರಂದು ಸಂಜೆ 6.30 ರ ಸುಮಾರಿಗೆ ನಡೆದಿದ್ದ ದರೋಡೆ ಪ್ರಕರಣದಲ್ಲಿ ಒಟ್ಟು 21.04 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ನಗದು ಕಳುವಾಗಿತ್ತು. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿನ ಎಸ್‌ಬಿಐ ಬ್ಯಾಂಕ್‌ನಲ್ಲಿ ಮೂವರು ಮಾಸ್ಕ್ ಧರಿಸಿ, ಗನ್ ತೋರಿಸಿ ದರೋಡೆ ಮಾಡಿದ್ದರು.
ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ದರೋಡೆಕೋರರದ್ದು ಎನ್ನಲಾದ ಕಾರು ಮಹಾರಾಷ್ಟ್ರದ ಹುಲಜಂತಿಯಲ್ಲಿ ಪತ್ತೆಯಾಗಿತ್ತು. ಇದೀಗ ಮನೆಯ ಮಾಳಿಗೆಯೊಂದರ ಮೇಲೆ ಚಿನ್ನ ತುಂಬಿದ ಬ್ಯಾಗ್ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ಯಾಗ್‌ನಲ್ಲಿ ಎಷ್ಟು ಚಿನ್ನ, ನಗದು ಇದೆ ಎಂದು ತನಿಖೆ ಕೈಗೊಳ್ಳಲಾಗಿದ್ದು, ಮಧ್ಯಾಹ್ನದಷ್ಟೊತ್ತಿಗೆ ಪ್ರಕರಣ ಪ್ರಕರಣ ಕ್ಕೆ ಸಂಬಂದಿಸಿದಂತೆ ಎಸ್ ಪಿ ಲಕ್ಷ್ಮಣ ನಿಂಬರಗಿ ಸುದ್ದಿ ಗೋಷ್ಠಿ ಆಯೋಜಿಸಿದ್ದು, ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.