

ಕೋಟ: ಸೂರ್ಯನಾರಾಯಣ ಚಡಗ ಕಾದಂಬರಿ ಪ್ರಶಸ್ತಿ ಪ್ರದಾನ ಕೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ.ಕಾರಂತ ಸಭಾಭವನದಲ್ಲಿ ನಡೆಯಿತು. ಸಂತೋಷ ಕುಮಾರ ಮೆಹಂದಳೆ, ಡಾ.ಶಾಂತಲಾ ಪ್ರಶಸ್ತಿ ಸ್ವೀಕರಿಸಿದರು.
ವಿಮರ್ಶಕ ಬೆಳಗೋಡು ರಮೇಶ ಭಟ್ಟ, ನಾಡೋಜ ಕೆ.ಪಿ.ರಾಯರು, ನೀಲಾವರ ಸುರೇಂದ್ರ ಅಡಿಗ, ಸೂರ್ಯನಾರಾಯಣ ಚಡಗರ ಪುತ್ರ ಶೇಷನಾರಾಯಣ ಚಡಗ, ಪ್ರಶಸ್ತಿ ಪ್ರಾಯೋಜಕ ಡಾ.ಎನ್.ಭಾಸ್ಕರ್ ಆಚಾರ್ಯ ಸ್ವಾಗತಿಸಿದರು. ಡಾ.ಸಬಿತಾ ಆಚಾರ್ಯ ಪುಸ್ತಕಗಳನ್ನು ನೀಡಿ ಗೌರವಿಸಿದರು. ಸ್ಪರ್ಧಾ ಸಮಿತಿ ಸಂಚಾಲಕ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ವಂದಿಸಿದರು. ಮಹಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.