

ಎನ್.ಎಲ್. ಶಿವಮಾದು
ಬೆಂಗಳೂರು: ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಸರ್ಕಾರಿ ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಟಾಪ್- 100ರೊಳಗಿನ ನಲ್ಲಿ ಸೀಟು ಪಡೆಯುವಲ್ಲಿ ವಿಲರಾಗಿದ್ದಾರೆ.
100, 1000, 10,000 ಅಲ್ಲ, 50 ಸಾವಿರದ ರ‌್ಯಾಂಕ್‌ನಲ್ಲಿಯೂ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ರ‌್ಯಾಂಕ್ ಪಡೆದಿಲ್ಲ. ಇಂಜಿನಿಯರಿಂಗ್‌ನ 50 ಸಾವಿರ ರ‌್ಯಾಂಕ್‌ನಲ್ಲಿ 311 ವಿದ್ಯಾರ್ಥಿಗಳಷ್ಟೇ ರ‌್ಯಾಂಕ್ ಪಡೆದಿದ್ದಾರೆ. ಇದರಿಂದ ಸರ್ಕಾರಿ ಕೋಟಾ ಸೀಟುಗಳು ಸಹ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಪಾಲಾಗಲಿದೆ. 2024-25ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಪಿಯು ಕಾಲೇಜುಗಳ 25 ಸಾವಿರ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ ನೀಡಿತ್ತು.
ಸಿಇಟಿ ಮೊದಲ ಟಾಪ್ 100 ರ‌್ಯಾಂಕ್‌ನಲ್ಲಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಸೇರಿ ಇತರ ವೃತ್ತಿ ಶಿಕ್ಷಣ ಕೋರ್ಸ್‌ಗಳಾದ ಬಿ-ಾರ್ಮಾ, ನರ್ಸಿಂಗ್, ಾರ್ಮಾ-ಡಿ, ಬಿಎಸ್‌ಸಿ ಕೃಷಿ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪತಿಯಲ್ಲಿ ಶೂನ್ಯ ಸಂಪಾದನೆಯಾಗಿದೆ. ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಟಾಪ್ 100ರಲ್ಲಿ 95 ಸೀಟು ವಶಪಡಿಸಿಕೊಂಡಿದ್ದಾರೆ.
ಸಾವಿರದಲ್ಲಿ ಸಿಕ್ಕಿದ್ದು ಒಂದೇ:
ಮೊದಲ ಸಾವಿರ ರ‌್ಯಾಂಕ್‌ನಲ್ಲಿ ಸರ್ಕಾರಿ ಕಾಲೇಜಿನ ಒಬ್ಬ ವಿದ್ಯಾರ್ಥಿ ಮಾತ್ರ ಇಂಜಿನಿಯರಿಂಗ್ ಸೀಟು ಪಡೆದಿದ್ದಾನೆ. ಉಳಿದಂತೆ, ಬಿ-ಾರ್ಮಾದಲ್ಲಿ 2, ನರ್ಸಿಂಗ್-4, ಾರ್ಮಾ-ಡಿ-2, ಬಿಎಸ್‌ಸಿ ಕೃಷಿ-1, ಪಶುವೈದ್ಯಕೀಯ-4, ಯೋಗ ಮತ್ತು ನ್ಯಾಚುರೋಪತಿಯಲ್ಲಿ ನಾಲ್ವರು ಅಭ್ಯರ್ಥಿಗಳು ಸ್ಥಾನ ಪಡೆದಿದ್ದಾರೆ.
ಉಪನ್ಯಾಸಕರ ಅಲಭ್ಯತೆಯೂ ಕಾರಣ:
ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಕನಿಷ್ಠ 20-25 ದಿನಗಳ ನಂತರ ಸಿಇಟಿ ಪರೀಕ್ಷೆ ನಡೆಯುತ್ತದೆ. ವಾರ್ಷಿಕ ಪರೀಕ್ಷೆವರೆಗೂ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಯತ್ತ ಗಮನಹರಿಸಿರುತ್ತಾರೆ. ಉಳಿದ 20 ದಿನಗಳ ಸಮಯವನ್ನು ಸಂಪೂರ್ಣವಾಗಿ ಸಿಇಟಿಗೆ ಆದ್ಯತೆ ನೀಡಿರುತ್ತಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಬೇಕಾಗುತ್ತದೆ. ಆದರೆ, ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ನಂತರ ಸರ್ಕಾರಿ ಕಾಲೇಜಿನ ಉಪನ್ಯಾಸಕರು ಮೌಲ್ಯಮಾಪನಕ್ಕೆ ತೆರಳುತ್ತಾರೆ. ಇದರಿಂದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾರಿ ನಷ್ಟವಾಗಲಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರೆ ಖಂಡಿತವಾಗಿಯೂ ಒಂದಿಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರು.
ಸಿಇಟಿ ಲಿತಾಂಶಕ್ಕೆ ತಲಾ ಶೇ.50 ದ್ವಿತೀಯ ಪಿಯುಸಿ ಮತ್ತು ಸಿಇಟಿ ಅಂಕ ಪರಿಗಣಿಸಲಾಗುತ್ತದೆ. ರ‌್ಯಾಂಕ್ ಪಡೆಯಲು ಸಿಇಟಿ ಅಂಕಗಳಷ್ಟೇ ದ್ವಿತೀಯ ಪಿಯುಸಿ ಅಂಕ ಕೂಡ ಮುಖ್ಯವಾಗುತ್ತದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಸರ್ಕಾರಿ ಕಾಲೇಜಿನ 33,287 ವಿದ್ಯಾರ್ಥಿಗಳಲ್ಲಿ ಉತ್ತೀರ್ಣರಾಗಿರುವವರು 18,330 ಮಾತ್ರ (ಶೇ.55.07). 2024ರಲ್ಲಿ ಸರ್ಕಾರಿ ಕಾಲೇಜುಗಳ ಲಿತಾಂಶವು ಶೇ.77.87 ಇತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.22.8 ಲಿತಾಂಶ ಕುಸಿತವಾಗಿದೆ. ಈ ಲಿತಾಂಶ ಕೂಡ ಸಿಇಟಿ ಮೇಲೆ ಭಾರಿ ಪರಿಣಾಮ ಬೀರಿದೆ. ಸಿಇಟಿಯಲ್ಲಿ ಉತ್ತಮ ಅಂಕಗಳಿದ್ದು, ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕಗಳಿದ್ದರೂ ನಿರೀಕ್ಷಿತ ರ‌್ಯಾಂಕ್ ಪಡೆಯುವಲ್ಲಿ ಸಲರಾಗುವುದಿಲ್ಲ. ಈ ಎಲ್ಲ ಕಾರಣಗಳಿಂದ ರ‌್ಯಾಂಕ್ ಕುಸಿತವಾಗಿದೆ. ಈ ವರ್ಷ ಖಾಸಗಿ ಕಾಲೇಜಿನ ಶೇ.88.08 ಮಕ್ಕಳು ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿದ್ದರು.
ಯೋಜನೆ ಬದಲಾವಣೆಗೆ ಉಪನ್ಯಾಸಕರ ಸಲಹೆ ಏನು?
ರಾಜ್ಯ ಸರ್ಕಾರವು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ ನೀಡುವ ಯೋಜನೆಯು ಉತ್ತಮವಾಗಿದೆ. ಆದರೆ, ಅದನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಿದರೆ ಅನುಕೂಲವಾಗಲಿದೆ. -ಎ.ಎಚ್. ನಿಂಗೇಗೌಡ, ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ