ಈರುಳ್ಳಿ ಬಫರ್ ಸ್ಟಾಕ್ ತಗೊಳ್ಳಿ, ದಾಸ್ತಾನಿಗೂ ಮಿತಿ ಇರಲಿ ಎಂದ ಕೇಂದ್ರ ಸರ್ಕಾರ

Onion
Published on

ನವದೆಹಲಿ : ಈರುಳ್ಳಿ ಬೆಲೆ ಏರಿಕೆ ತೀವ್ರಗತಿಯಲ್ಲಿ ಸಾಗಿದ್ದು, ಇದನ್ನು ನಿಯಂತ್ರಿಸುವುದಕ್ಕೆ ಬಫರ್ ಸ್ಟಾಕ್​ ತಗೊಂಡು ಮಾರುಕಟ್ಟೆಗೆ ಪೂರೈಕೆ ಮಾಡಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಇದೇ ವೇಳೆ, ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಡಿಸೆಂಬರ್ 31ರವರೆಗೆ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ದಾಸ್ತಾನಿನ ಮೇಲೆ ಮಿತಿ ವಿಧಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್, ಚಿಲ್ಲರೆ ವ್ಯಾಪಾರಿಗಳಿಗೆ ಗರಿಷ್ಠ 2 ಟನ್ ಹಾಗೂ ಸಗಟು ವ್ಯಾಪಾರಿಗಳಿಗೆ ಗರಿಷ್ಠ 25 ಟನ್​ಗಳವರೆಗೆ ಈರುಳ್ಳಿ ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ. ಅಸ್ಸಾಂ, ಆಂಧ್ರಪ್ರದೇಶ, ಬಿಹಾರ, ಚಂಡೀಗಢ, ಹರಿಯಾಣ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ಕೇಂದ್ರದಿಂದ ಈರುಳ್ಳಿ ಪಡೆಯಲು ಆಸಕ್ತಿ ತೋರಿಸಿದ್ದು, ಈವರೆಗೆ ಒಟ್ಟು 8,000 ಟನ್ ಈರುಳ್ಳಿ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ನಾಸಿಕ್​ನಲ್ಲಿರುವ ಬಫರ್ ಸ್ಟಾಕ್​ನಿಂದ ಪ್ರತಿಗೆ ಕೆ.ಜಿ 26 ರಿಂದ 28 ರೂ.ನಂತೆ ರಾಜ್ಯಗಳು ಈರುಳ್ಳಿಯನ್ನು ಖರೀದಿಸಬಹುದು. ಶೀಘ್ರದಲ್ಲೇ ಮುಂಗಾರು ಈರುಳ್ಳಿ ಮಾರುಕಟ್ಟೆಗೆ ಬರಲಿದೆ. ಇದರಿಂದ ಪೂರೈಕೆ ಹೆಚ್ಚಾಗಿ ಬೆಲೆ ಇಳಿಕೆ ಕಾಣಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net