ಯಾರ ಮೇಲೂ ಹಿಂದಿ ಹೇರಿಕೆ ಮಾಡಿಲ್ಲ: ಸಚಿವ ಧರ್ಮೆಂದ್ರ ಪ್ರಧಾನ್​ ಸ್ಪಷ್ಟನೆ

Pradhan
Published on

ಬೆಂಗಳೂರು: ಯಾರ ಮೇಲೂ ಹಿಂದಿ ಭಾಷೆ ಒತ್ತಡ ಹೇರಿಲ್ಲ ಎಂದು ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್​ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರ ಮೇಲೂ ಇಂತಹದ್ದೇ ಭಾಷೆ ಕಲಿಯಬೇಕು ಅಂತ ಒತ್ತಡ ಹೇರಲು ಸಾಧ್ಯವಿಲ್ಲ. ಹಾಗೆ ಹಿಂದಿ ಒತ್ತಡ ಯಾರ ಮೇಲೂ ಹಾಕಿಲ್ಲ ಎಂದು ಹೇಳಿದ್ದಾರೆ.

ಹಿಂದಿ ರಾಷ್ಟ್ರೀಯ ಭಾಷೆ ಎಂಬ ಅಜಯ್ ದೇವಗನ್ ಹೇಳಿಕೆ ವಿಚಾರಕ್ಕೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿ ರಾಷ್ಟ್ರೀಯ ಭಾಷೆ ಅಂತ ಯಾರು ಹೇಳಿಲ್ಲ.ಹಿಂದಿ‌ ಹೇರಿಕೆ ಕೂಡಾ ನಾವು ಮಾಡುವುದಿಲ್ಲ. ಮಾತೃಭಾಷೆಗೆ ಆದ್ಯತೆ ನೀಡುತ್ತೇವೆ. ವಿದ್ಯಾರ್ಥಿಗಳು ಇಚ್ಚೆ ಪಡೋ ಭಾಷೆಯಲ್ಲಿ ಕಲಿಯಬಹುದು.ಹಾಗೆ ಮಾಡಿದರೆ ಕೌಶಲ್ಯ ಮತ್ತು ಪ್ರತಿಭೆ ಹೊರ ಬರುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net