

"ರಾ.ಒನ್', "ಮುಲ್ಕ್', "ಥಪ್ಪಡ್', "ಆರ್ಟಿಕಲ್ 15', "ಭೀಡ್' ಸೇರಿ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವ್ ಸಿನ್ಹಾ ಆ್ಯಕ್ಷನ್&ಕಟ್ ಹೇಳಿರುವ ಮೊದಲ ವೆಬ್ಸರಣಿ "ಐಸಿ 814: ದ ಕಂದಹಾರ್ ಹೈಜಾಕ್'. 1999ರಲ್ಲಿ ಇಂಡಿಯನ್ ಏರ್ಲೈನ್ಸ್ನ ಐಸಿ 814 ವಿಮಾನವನ್ನಯ ಐವರು ಉಗ್ರರು ಹೈಜಾಕ್ ಮಾಡಿದ್ದ ಟನೆ ಸುತ್ತ ಕಥೆ ಸಾಗುತ್ತದೆ. ಆ ವಿಮಾನದ ಪೈಲಟ್ ಆಗಿದ್ದ ದೇವಿ ಶರಣ್ ಅವರೇ ಬರೆದಿದ್ದ "್ಲೆ$ಟ್ ಇನ್ಟು ಫಿಯರ್ : ದ ಕ್ಯಾಪ್ಟನ್ಸ್ ಸ್ಟೋರಿ' ಬಯೋಗ್ರಫಿ ಆಧಾರಿತ ಸರಣಿಯಿದು. ನಾಸಿರುದ್ದೀನ್ ಶಾ, ಪಂಕಜ್ ಕಪೂರ್, ವಿಜಯ್ ವರ್ಮಾ, ದಿಯಾ ಮಿರ್ಜಾ, ಅರವಿಂದ್ ಸ್ವಾಮಿ, ಪತ್ರಲೇಖಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಸರಣಿ ಇದೇ ಆ. 29ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿತ್ತು. ರಿಲೀಸ್ ಆದ ಐದೇ ದಿನಗಳಲ್ಲಿ "ಐಸಿ 814' ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಬಾಯ್ಕಾಟ್ ನೆಟ್ಫ್ಲಿಕ್ಸ್ ಹ್ಯಾಷ್ಟ್ಯಾಗ್ ಜಾಲತಾಣದಲ್ಲಿ ಟ್ರೆಂಡ್ ಆಗುವಂತೆ ಮಾಡಿದೆ.
ಹೈಜಾಕ್ ಹಿನ್ನೆಲೆ:
ಪಾಕಿಸ್ತಾನ ಮೂಲದ ಹರ್ಕತ್ ಉಲ್ ಮುಜಾಹಿದೀನ್ನ ಐವರು ಉಗ್ರರಾದ ಇಬ್ರಾಹಿಂ ಅಖ್ತರ್, ಶಾಹಿದ್ ಅಖ್ತರ್ ಸಯೀದ್, ಸನ್ನಿ ಅಹ್ಮದ್ ಖಾಜಿ, ಜಹೂರ್ ಮಿಸ್ತ್ರಿ ಮತ್ತು ಶಾಕಿರ್ ಐಸಿ 814 ವಿಮಾನವನ್ನು 1999ರ ಡಿ. 24ರಂದು ಹೈಜಾಕ್ ಮಾಡಿದ್ದರು. ಭಾರತದಲ್ಲಿ ಬಂಧಿತರಾಗಿದ್ದ ವಿವಿಧ ಭಯೋತ್ಪಾದಕ ಸಂಟನೆಗಳ ಮಸೂದ್ ಅಜರ್, ಅಹ್ಮದ್ ಓಮರ್ ಸಯೀದ್ ಶೇಖ್ ಮತ್ತು ಮುಷ್ತಾಖ್ ಅಹ್ಮದ್ ರ್ಜಗಾರ್ರನ್ನು ಬಿಡುಗಡೆ ಮಾಡುವಂತೆ ಬೇಡಿಕೆಯಿಟ್ಟಿದ್ದರು. ಕಾಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ಈ ವಿಮಾನದಲ್ಲಿ 176 ಪ್ರಯಾಣಿಕರು, 15 ಇಂಡಿಯನ್ ಏರ್ಲೈನ್ಸ್ ಸಿಬ್ಬಂದಿ ಸೇರಿ 191 ಮಂದಿಯಿದ್ದರು. ಅವರ ರಕ್ಷಣೆಗಾಗಿ ಭಾರತ ಸರ್ಕಾರ ಉಗ್ರರ ಬೇಡಿಕೆಗೆ ಮಣಿಯಬೇಕಾಯಿತು.
ಕಾಂಟ್ರವರ್ಸಿಗೆ ಕಾರಣ?
ಐವರು ಉಗ್ರರು ಹೈಜಾಕ್ ಸಮಯದಲ್ಲಿ ಚೀಫ್, ಡಾಕ್ಟರ್, ರ್ಬಗರ್, ಭೋಲಾ ಮತ್ತು ಶಂಕರ್ ಎಂಬ ಕೋಡ್ನೇಮ್ಗಳನ್ನು ಬಳಸಿದ್ದರು. ಇದೀಗ ಈ ವೆಬ್ಸರಣಿಯಲ್ಲೂ ಅದೇ ಹೆಸರುಗಳನ್ನು ಬಳಸಿಕೊಳ್ಳಲಾಗಿದ್ದು, ಅವರ ನಿಜ ಹೆಸರುಗಳನ್ನು ಮರೆಮಾಚಲಾಗಿದೆ ಎಂದು ವೀಕ್ಷಕರು ಆರೋಪಿಸಿದ್ದಾರೆ. ಈ ಕುರಿತು ಜಾಲತಾಣದಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸರಣ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದ್ದು, ನೆಟ್ಫ್ಲಿಕ್ಸ್ ಇಂಡಿಯಾ ಕಂಟೆಂಟ್ ಹೆಡ್ ಮೋನಿಕಾ ಶೇರ್ಗಿಲ್ಗೆ ಸಮನ್ಸ್ ನೀಡಿದೆ.