

ನವದೆಹಲಿ: ಭಾರತದಲ್ಲಿ ವಾಟ್ಸ್ಆ್ಯಪ್ ಜಾರಿಗೆ ತಂದಿರುವ ನೂತನ ಪ್ರೖೆವೆಸಿ ನಿಯಮ ವಿವಾದಕ್ಕೀಡಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ವಿವಾದಿತ ಪ್ರೖೆವೆಸಿ ನಿಯಮವನ್ನು ಭಾರತೀಯರ ಮಟ್ಟಿಗೆ ಹಿಂಪಡೆಯಬೇಕು. ಆ ಮೂಲಕ ಭಾರತೀಯ ಬಳಕೆದಾರರ ಮಾಹಿತಿ ಖಾಸಗಿತನ ಮತ್ತು ಡೇಟಾ ಭದ್ರತೆಯನ್ನು ಗೌರವಿಸಬೇಕು ಎಂದು ವಾಟ್ಸ್ಆಪ್ಗೆ ಸೂಚಿಸಿದೆ.
ಮೂಲಗಳ ಪ್ರಕಾರ, ಕಂಪನಿಗೆ ಪ್ರಶ್ನಾವಳಿಯ ದೊಡ್ಡ ಪಟ್ಟಿಯೊಂದನ್ನು ಕೇಂದ್ರ ಸರ್ಕಾರ ರವಾನಿಸಿದ್ದು, ಅದಕ್ಕೆ ಸ್ಪಷ್ಟೀಕರಣವನ್ನೂ ಕೇಳಿದೆ. ಯುರೋಪ್ ಮಾದರಿಯಲ್ಲೇ ಭಾರತೀಯರಿಗೂ ಬಳಕೆದಾರರ ಪ್ರೖೆವೆಸಿ ಕಾಪಾಡುವುದಕ್ಕೆ ಕೇಂದ್ರ ಸರ್ಕಾರ ಮುತುವರ್ಜಿವಹಿಸಿದೆ.