ವಿದ್ಯುತ್​ ಬಿಲ್​ ಪಾವತಿಗೆ ಮೂರು ತಿಂಗಳು ಗಡುವು ನೀಡುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದ ಕೇಂದ್ರ

electricity-bill 12
Published on

ನವದೆಹಲಿ: ರಾಷ್ಟ್ರದಲ್ಲಿ ಕರೊನಾ ವೈರಸ್​ ಹಾವಳಿ ಹಿನ್ನೆಲೆಯಲ್ಲಿ ವಿದ್ಯುತ್​ ಬಿಲ್​ ಪಾವತಿ ಮಾಡಲು 3 ತಿಂಗಳ ಅವಧಿ ನೀಡುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ವೈರಸ್​ ಹರಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಇಡೀ ದೇಶವನ್ನು ಲಾಕ್​ಡೌನ್​ ಮಾಡಿದೆ. ಇದರಿಂದ ಖಾಸಗಿ, ಸರ್ಕಾರಿ ಕಚೇರಿಗಳು ಬಂದ್​ ಆಗಿವೆ. ಕಾರ್ಖಾನೆಗಳು, ಎಲ್ಲ ರೀತಿಯ ಸೇವಾ ಕ್ಷೇತ್ರಗಳು ಬಂದ್​ ಆಗಿರುವುದರಿಂದ ರಾಜ್ಯ ಸರ್ಕಾರ ವಿದ್ಯುತ್​ ಬಿಲ್​ ಪಾವತಿಗೆ ಮೂರು ತಿಂಗಳು ಗಡುವು ನೀಡಬೇಕು ಎಂದು ಸೂಚಿಸಿದೆ.

ಮೂರು ತಿಂಗಳ ನಂತರ ಪಾವತಿಸುವ ಬಿಲ್​ಗೆ ದಂಡ ವಿಧಿಸುವಂತೆ ಎಂಬ ಸೂಚನೆಯನ್ನು ಕೂಡ ಕೇಂದ್ರ ಸರ್ಕಾರ ನೀಡಿದೆ ಎಂದು ತಿಳಿದು ಬಂದಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ರಾಜ್ಯ ಸರ್ಕಾರಗಳು ಯಾವ ರೀತಿ ಜಾರಿಗೆ ತರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net