ಸಾಮಾಜಿಕ ಜಾಲತಾಣಗಳಲ್ಲಿ ಮೊಳಗಲಿದೆ ಕೇಂದ್ರದ ಸಾಧನೆಯ ‘ಶಂಖನಾದ’ !

BJP program
Published on

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸಾಧನೆ, ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ಒಂದಿಲ್ಲೊಂದು ಪ್ರಯೋಜನ, ಯೋಜನೆಗಳ ಕೊಡುಗೆಗಳನ್ನು ಜನರ ಮನ, ಮನೆ ಬಾಗಿಲಿಗೆ ತಲುಪಿಸಲು ‘ಶಂಖನಾದ ಅಭಿಯಾನ’ವನ್ನು ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠ ಹಮ್ಮಿಕೊಂಡಿದೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಸಂಸದ ಶಂಖ ಊದುವ ಮೂಲಕ ಈ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿದರು. ಡಿಜಿಟಲ್ ಯುಗದಲ್ಲಿ ಮಾಹಿತಿ ಪಡೆಯಲು, ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳ ಪ್ರಾಮುಖ್ಯತೆ ಪಡೆದುಕೊಂಡಿವೆ.

ಪ್ರತಿಯೊಬ್ಬರ ಕೈಯ್ಯಲ್ಲೂ ಮೊಬೈಲ್‌ಗಳಿವೆ. ತಂತ್ರಜ್ಞಾನದ ಸುಧಾರಣೆಯಿಂದ ಬೆರಳ ತುದಿಯಲ್ಲೇ ಜನರಿಗೆ ತಕ್ಷಣ ವಿಷಯ ಗೊತ್ತಾಗುತ್ತಿವೆ. ಮೋದಿ ಸಾರಥ್ಯದ ಆಡಳಿತ ದೇಶವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ದ ಪರಿಯನ್ನು ಪ್ರಭಾವಶಾಲಿಯಾಗಿ ಬಿಂಬಿಸಬೇಕು ಎಂದು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಅಭಿಯಾನದ ಕಾರ್ಯಚಟುವಟಿಕೆಗಳು

ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಮಾಹಿತಿ, ಸಚಿತ್ರ ಅಥವಾ ವಿಡಿಯೋ ದೃಶ್ಯಗಳೊಂದಿಗೆ ಯಶೋಗಾಥೆ, ಲಾನುಭವಿಗಳ ಅನಿಸಿಕೆ, ಅಧ್ಯಯನ ಕಾರ್ಯಗಳು, ಪರಿಣತರ, ಲಾನುಭವಿಗಳ ಅಭಿಪ್ರಾಯಗಳ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರ.

ಜಾಗತಿಕಮಟ್ಟದಲ್ಲಿ ದೇಶದ ಪ್ರಗತಿಯ ವೇಗ, ಆರ್ಥಿಕತೆ ಕುರಿತು ಅಂಕಿ-ಅಂಶಗಳನ್ನು ಬೇರೆ ದೇಶಗಳ ದತ್ತಾಂಶಗಳ ಸಹಿತ ತುಲನಾತ್ಮಕ, ನಿಖರ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಕ್ಕೆ ಪ್ರಕೋಷ್ಠ ಸನ್ನದ್ಧವಾಗಿದೆ ಎಂದು ಮೂಲಗಳು ವಿವರಿಸಿವೆ.

ಅಭಿಯಾನಕ್ಕೆ ಚಾಲನಾ ಕಾರ್ಯಕ್ರಮದಲ್ಲಿ ಪಕ್ಷದ ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಕಾಸ್ ಪುತ್ತೂರು, ಗೋವಾ ವಕ್ತಾರ ಗಿರಿರಾಜ್ ಪೈ, ಅಭಿಯಾನದ ಪ್ರಭಾರಿ ವಿಕಾಸ್ ಪಾಂಡೆ, ರಾಜ್ಯ ಸಂಚಾಲಕ ರಾಘವೇಂದ್ರ ನಾಗೂರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net