ಕೇಂದ್ರ ಬಜೆಟ್​: 100 ಹೊಸ ಸೈನಿಕ ಶಾಲೆಗಳ ಸ್ಥಾಪನೆ

military school
Published on

ನವದೆಹಲಿ: ಇಂದು ಮಂಡನೆಯಾದ 2021-22ನೇ ಸಾಲಿನ ಕೇಂದ್ರ ಬಜೆಟ್​ ​ಯಾರಿಗೂ ಹೊರೆ ಇಲ್ಲ.. ಯಾರಿಗೂ ಉಡುಗೊರೆ ಇಲ್ಲ ಎಂಬಂತಿದೆ. ಕರೊನಾ ಪರಿಣಾಮ ದೇಶದ ಆರ್ಥಿಕತೆ ಕಂಗೆಟ್ಟಿದ್ದು, ಚೇತರಿಕೆ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್‌, ಆರೋಗ್ಯದ ಜತೆಗೆ ಶಿಕ್ಷಣ ಕ್ಷೇತ್ರಕ್ಕೂ ಆದ್ಯತೆ ನೀಡಿದ್ದಾರೆ. ದೇಶಾದ್ಯಂತ 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ ಸಚಿವೆ, ಲೇಹ್​​ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ ಆಗಲಿದೆ ಎಂದರು. ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಶಿಕ್ಷಣ ಕ್ಷೇತ್ರ ಕುರಿತಾಗಿ ಏನೆಲ್ಲ ಪ್ರಸ್ತಾಪ ಆಯ್ತು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

  • ಎನ್‌ಜಿಒ ಜತೆಗೂಡಿ 100 ಹೊಸ ಸೈನಿಕ ಶಾಲೆಗಳ ಸ್ಥಾಪನೆ
  • ರಾಷ್ಟ್ರೀಯ ಶಿಕ್ಷಣ ನೀತಿಯಡಿ 15,000 ಶಾಲೆಗಳ ಸಬಲೀಕರಣ
  • ಏಕಲವ್ಯ ಶಾಲೆಗಳ ಸ್ಥಾಪನೆಗಾಗಿ 40 ಕೋಟಿ ರೂ.
  • ಲೇಹ್‌ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ
  • ರಾಷ್ಟ್ರೀಯ ಭಾಷಾ ಅನುವಾದ ಮಿಷನ್ ಸ್ಥಾಪನೆ
  • ಸಂಶೋಧನೆಯಾಗಿ 50 ಸಾವಿರ ಕೋಟಿ ರೂ. ಇದನ್ನೂ ಓದಿರಿ ಕೇಂದ್ರ ಬಜೆಟ್: 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net