

ಸಿದ್ದಾಪುರ: ಗಣೇಶ ಚತುರ್ಥಿ ನಿಮಿತ್ತ ಸಿದ್ದಾಪುರದಲ್ಲಿ ಸಡಗರದಿಂದ ಗಣೇಶ ಹಬ್ಬವನ್ನು ಶನಿವಾರ ಆಚರಿಸಲಾಯಿತು.
ಗ್ರಾಮದ ವಿವಿಧೆಡೆ ಬೆಳಗ್ಗೆಯೇ ನಾನಾ ಬಗೆಯ ಪೂಜೆ, ಪುನಸ್ಕಾರಗಳೊಂದಿಗೆ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು. ಗೃಹಿಣಿಯಯರು ಹೋಳಿಗೆ, ಕರಿಗಡಬು ಸೇರಿ ನಾನಾ ಬಗೆಯ ತಿನಿಸುಗಳನ್ನು ಮಾಡಿ ಗಣೇಶನಿಗೆ ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠ್ಠಾಪನೆ ಮಾಡಲಾಗಿದೆ.