ಮಂಡ್ಯ: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿದ ಹಿನ್ನಲೆಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಸಿಹಿ ಹಂಚಿಕೆ ಮಾಡಿ ಸಂಭ್ರಮಿಸಿದರು.
ಜಿಲ್ಲಾ ಬಿಜೆಪಿ ಮಹಿಳಾ ವತಿಯಿಂದ ನಗರದ ಬಿಜೆಪಿ ಕಚೇರಿ ಬಳಿ ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜಯ ಘೋಷ ಮೊಳಗಿಸಿ ಮಹಿಳಾ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರಕಿಸಿಕೊಟ್ಟ ಬಿಜೆಪಿ ಪಕ್ಷಕ್ಕೆ ಮಹಿಳೆಯರ ಸದಾಕಾಲ ಚಿರಋಣಿ ಯಾಗಿರಲಿದ್ದಾರೆ ಎಂದರು.
ಮಹಿಳಾ ಮೋರ್ಚಾದ ಅಧ್ಯಕ್ಷೆ ಯಶೋಧಾ, ಮದ್ದೂರು ತಾಲೂಕು ಅಧ್ಯಕ್ಷೆ ಶ್ವೇತಾ, ಶ್ರೀರಂಗಪಟ್ಟಣ ಅಧ್ಯಕ್ಷೆ ಕೆ.ಎಂ.ಶಾರದಾ, ದೇವಿರಮ್ಮ, ಮಂಜುಳಾ, ವಿಜಯಕುಮಾರಿ, ಪುಟ್ಟಮ್ಮ, ತಾಯಮ್ಮ, ಸೌಮ್ಯ, ರಂಜಿತಾ, ಸುಕನ್ಯಾ, ಶಕುಂತಲಾ, ಲಕ್ಷ್ಮೀ, ಪದ್ಮಾವತಿ, ಸುಧಾಮಣಿ ಇತರರಿದ್ದರು.