More

    ಮಲೆನಾಡಿನ ಎಲ್ಲ ಸಮಸ್ಯೆಗೆ ಅಕೇಶಿಯಾವೇ ಕಾರಣ

    ಶಿವಮೊಗ್ಗ: ಮಲೆನಾಡು ಇಂದು ಎದುರಿಸುತ್ತಿರುವ ಹವಾಮಾನ ಬದಲಾವಣೆ, ಅಕಾಲಿಕ ಮಳೆ, ಕೃಷಿ ಭೂಮಿಗೆ ಕಾಡು ಪ್ರಾಣಿಗಳ ಕಾಟ ಎಲ್ಲದಕ್ಕೂ ಅಕೇಶಿಯಾ ಕಾರಣ. ಜಿಲ್ಲೆಯಲ್ಲಿ ಮತ್ತೆ ಅಕೇಶಿಯಾ ನೆಡುತೋಪು ನಿರ್ವಣಕ್ಕೆ ಸರ್ಕಾರ ಅವಕಾಶ ನೀಡಿದರೆ ಅದು ಜನರಿಗೆ ಮಾಡುವ ದ್ರೋಹ ಎಂದು ಪರಿಸರವಾದಿ ಪ್ರೊ. ಬಿ.ಎಂ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

    ಈಗಾಗಲೇ ಸಂಪೂರ್ಣವಾಗಿ ಜೀವ ಕಳೆದುಕೊಂಡಿರುವ ಎಂಪಿಎಂಗೆ ಮತ್ತೆ ಅಕೇಶಿಯಾ ಬೆಳೆಸಲು ಅವಕಾಶ ನೀಡಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ. ಅಕೇಶಿಯಾ ಹಾಗೂ ನೀಲಗಿರಿ ನೆಡುತೋಪಿನಿಂದ ಈಗಾಗಲೇ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.

    ಇದನ್ನೂ ಓದಿ: ‘ನಾನು ಸಂಸತ್ತಿನಲ್ಲಿರಬೇಕಿತ್ತು’ ರಾಜಕೀಯ ಸೇರುವ ಬಯಕೆ ಬಿಚ್ಚಿಟ್ಟ ಸೋನಿಯಾ ಗಾಂಧಿ ಅಳಿಯ

    ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟದಿಂದ ಗುರುವಾರ ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಏಕಜಾತಿಯ ನೆಡುತೋಪುಗಳನ್ನು ಅರಣ್ಯ ಎಂದು ಕರೆಯುವುದು ನಿಜಕ್ಕೂ ಶಬ್ದಕ್ಕೆ ಅಪಚಾರವಾದಂತೆ. ಮಲೆನಾಡಿನ ಪರಿಸರಕ್ಕೆ ಏಕ ಜಾತಿಯ ನೆಡುತೋಪು ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟರು.

    ಎಂಪಿಎಂ ಅರಣ್ಯವನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿಗೆ ಐದಾರು ವರ್ಷಗಳಿಂದ ವೇತನ ನೀಡಿರಲಿಲ್ಲ. ಈಗಾಗಲೇ ಬೆಳೆದಿರುವ ಅಕೇಶಿಯಾ ಮರಗಳನ್ನು ಕಟಾವು ಮಾಡಿ ಅವರಿಗೆ ವೇತನ ನೀಡಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದರು. ಇಂತಹ ಹೀನಾಯ ಸ್ಥಿತಿಯಲ್ಲಿರುವಾಗ ಮತ್ತೆ ಅಕೇಶಿಯಾ ಬೆಳೆಸಲು ಭೂಮಿ ಗುತ್ತಿಗೆ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
    ಇದನ್ನೂ ಓದಿ: ಈ ಚಿನ್ನ ಹಾಗೇ ಕೊಟ್ಟು ಎಲ್ಲಿತ್ತು ಅಂತ ಹೇಳಿದ್ರೆ ಮುಟ್ಟೋಕೂ ಅಸಹ್ಯ ಅನಿಸಬಹುದು!

    ಮಂಕಿ ಪಾರ್ಕ್ ಕಲ್ಪನೆ ಹಾಸ್ಯಾಸ್ಪದ: ಅಕೇಶಿಯಾ, ನೀಲಗಿರಿ ಮುಂತಾದ ಏಕಜಾತಿಯ ನೆಡುತೋಪುಗಳ ಕಾರಣದಿಂದ ಮಂಗ, ಕಾಡುಕೋಣ, ಚಿರತೆ ಮುಂತಾದ ಪ್ರಾಣಿಗಳು ಹಳ್ಳಿಗೆ ಬರುತ್ತಿವೆ. ಮಂಗಗಳಿಗೆ ಕಾಡಿನಲ್ಲಿ ಆಹಾರ ಸಿಗದೇ ಅವು ರೈತರ ಬೆಳೆಗಳನ್ನು ಹಾಳು ಮಾಡುತ್ತಿವೆ. ಈ ಸಂದರ್ಭದಲ್ಲಿ ಮಂಕಿ ಪಾರ್ಕ್ ಎಂಬ ಹಾಸ್ಯಾಸ್ಪದ ಕಲ್ಪನೆಯೊಂದು ಗರಿಗೆದರಿದೆ ಎಂದು ಪ್ರೊ.ಬಿ.ಎಂ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.

    ಕಚೇರಿಯೊಳಗೆ ಕುಳಿತು ಹೊರಗಿನ ವಾಸ್ತವ ಸಂಗತಿ ತಿಳಿಯದ ಅಧಿಕಾರಿಗಳಿಗೆ ಮಾತ್ರ ಮಂಕಿ ಪಾರ್ಕ್​ನಂತಹ ಕಲ್ಪನೆ ಬರಲು ಸಾಧ್ಯ. ಅದರ ಬದಲು ನೈಸರ್ಗಿಕ ಅರಣ್ಯ ಬೆಳೆಸಿದರೆ ಮಂಕಿ ಪಾರ್ಕ್​ನ ಅಗತ್ಯವೇ ಇರುವುದಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಹೇಳಿದರು.

    ರೈತ ಮುಖಂಡ ಕೆ.ಟಿ.ಗಂಗಾಧರ್, ವಕೀಲ ಕೆ.ಪಿ.ಶ್ರೀಪಾಲ್, ಡಿಎಸ್​ಎಸ್ ಸಂಚಾಲಕ ಎಂ.ಗುರುಮೂರ್ತಿ, ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ, ಪರಿಸರವಾದಿಗಳಾದ ಅಖಿಲೇಶ್ ಚಿಪ್ಳಿ, ಕಲ್ಕುಳಿ ವಿಠಲ ಹೆಗ್ಡೆ, ಡಾ.ಶೇಖರ್ ಗೌಳೇರ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

    ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts