More

    ಗ್ರಾಮ ಸಹಾಯಕರ ಹುದ್ದೆ ಕಾಯಂಗೊಳಿಸಿ

    ಬೆಳಗಾವಿ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮ, ಗ್ರಾಮ ಸಹಾಯಕರ ಹುದ್ದೆ ಮುಂದುವರಿಸುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಗ್ರಾಮ ಸಹಾಯಕರ ಹುದ್ದೆ ಕಾಯಂಗೊಳಿಸಿ ಮುಂದುವರಿಸಬೇಕು ಎಂದು ಆಗ್ರಹಿಸಿ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ಪದಾಧಿಕಾರಿಗಳು ಡಿಸಿಗೆ ಮನವಿ ಸಲ್ಲಿಸಿ ಮಾತನಾಡಿ, ನ್ಯಾಯಾಲಯದಲ್ಲಿ ದಾಖಲಾಗಿರುವ ಉಮಾದೇವಿ ಪ್ರಕರಣಕ್ಕೂ ಹುದ್ದೆ ಕಾಯಂ ಮಾಡುವುದಕ್ಕೂ ಯಾವುದೇ ಸಂಬಂಧ ಇಲ್ಲ. ಅಲ್ಲದೆ, ಯಾವುದೇ ಕಾನೂನು ತೊಡಕೂ ಇರುವುದಿಲ್ಲ. ಆದರೂ, ಗ್ರಾಮ ಸಹಾಯಕರ ಹುದ್ದೆ ರದ್ದು ಪಡಿಸಬೇಕು ಎಂಬ ಶಿಫಾರಸು ಸರಿಯಾದುದಲ್ಲ.

    ಸರ್ಕಾರವು ಕೂಡಲೇ ಇಂತಹ ಶಿಫಾರಸುಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಪ್ರಕಾಶ ಅಂತಣ್ಣವರ, ಮಡಿವಾಳಪ್ಪ ವಣ್ಣೂರ, ಮಹಾದೇವಪ್ಪ ಇಂಗಳಗಿ, ವೆಂಕಟೇಶ ಕೆಳಗೇರಿ, ರಾಮಣ್ಣ ಭಜಂತ್ರಿ, ಆನಂದ ಕಾಂಬಳೆ, ಸುನೀಲ ಕೋಲಕಾರ, ಸುರೇಶ ಅತ್ತಿಕೇರಿ ಇತರರು ಇದ್ದರು.

    ಜಿಎಸ್‌ಟಿ ಕಡಿಮೆ ಮಾಡಿ: ವೈದ್ಯಕೀಯ ಸಲಕರಣೆ, ಔಷಧಗಳ ಆನ್‌ಲೈನ್ ಮಾರಾಟ ವ್ಯವಸ್ಥೆ ರದ್ದುಪಡಿಸಬೇಕು. ಔಷಧ ದರಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯಲ ಸಲಕರಣೆ ಮೇಲಿನ ಜಿಎಸ್‌ಟಿ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಭಾರತೀಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಬುಧವಾರ ಪ್ರತಿಭಟಿಸಿತು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts