More

    ಸೇವಾ ಭದ್ರತೆ ಒದಗಿಸಲು ಒತ್ತಾಯ

    ಶಹಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕು ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೆ ಮನವಿಪತ್ರ ಸಲ್ಲಿಸಲಾಯಿತು.

    ಸಂಘದ ತಾಲೂಕು ಅಧ್ಯಕ್ಷೆ ಬಸಲಿಂಗಮ್ಮ ನಾಟೇಕರ್ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅಂಗನವಾಡಿ ನೌಕರರು ಸದಾ ದುಡಿಯುತ್ತಿದ್ದಾರೆ. ಹೈಕೋರ್ಟ್​ನ ಆದೇಶದಂತೆ ರಾಜ್ಯದ 47.37 ಲಕ್ಷ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೌಲತ್ತು ಖಾತ್ರಿಪಡಿಸಲಾಗಿದ್ದು, ಅಲ್ಲದೆ ಕೋವಿಡ್ ಫ್ರಂಟ್ಲೈನ್ ವಾರಿಯಸರ್್ ಆಗಿ ದುಡಿದು 59 ಜನರು ಬಲಿಯಾಗಿದ್ದಾರೆ ಎಂದರು.

    ಕೋವಿಡ್ ನಂತರದಲ್ಲಿ ಚುನಾವಣೆ, ವ್ಯಾಕ್ಸಿನ್ ಹಾಕುವುದು, ಸರ್ವೇ ಕಾರ್ಯ, ಪೋಷಣ್ ಅಭಿಯಾನದಂತಹ ಆಚರಣೆ ನಿರಂತರವಾಗಿ ನಡೆಯುತ್ತಿವೆ. ಆದರೂ ಸರ್ಕಾರ ಅಂಗನವಾಡಿ ನೌಕರರನ್ನು ಕಾಯಂಗೊಳಿಸದೆ ಶೋಷಣೆ ಮಾಡುತ್ತಿದೆ. ಸರ್ಕಾರ ಈಗಲಾದರೂ ಅಂಗನವಾಡಿ ಕಾರ್ಯಕರ್ತರ ಮೂಲ ಬೇಡಿಕೆ ಈಡೇರಿಸುವುದರ ಜತೆಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.

    ಸಿಐಟಿಯು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿದರು. ಸಂಘದ ತಾಲೂಕು ಕಾರ್ಯದರ್ಶಿ ಯಮುನಮ್ಮ ದೋರನಹಳ್ಳಿ, ಮುಖಂಡರಾದ ಚಂದಮ್ಮ ನಾಯ್ಕಲ್, ಮಹಾನಂದ ಚಂದಮ್ಮ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts