More

    ಮಕ್ಕಳಿಗೆ ಒದಗಿಸಿ ಪೌಷ್ಟಿಕ ಆಹಾರ

    ಅಳವಂಡಿ: ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು. ಅವರು ಅರೋಗ್ಯವಂತರಾಗಿ ಬೆಳೆಯಲು ಪೌಷ್ಟಿಕ ಆಹಾರ ಮುಖ್ಯ. ಪಾಲಕರು ತಪ್ಪದೆ ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ರೇಣುಕಾ ಬೀರೂರು ತಿಳಿಸಿದರು.

    ಬೋಚನಹಳ್ಳಿ ಅಂಗನವಾಡಿಯಲ್ಲಿ ಗ್ರಾಮ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಸಭೆಯಲ್ಲಿ ಶನಿವಾರ ಮಾತನಾಡಿದರು. ಆರು ತಿಂಗಳಿಂದ ಮೂರು ವರ್ಷದ ಮಗುವಿಗೆ ಗಂಜಿ ನೀಡಬೇಕು. ಸರ್ಕಾರ ನೀಡುವ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ನೀಡಬೇಕು. ಬಿಸಿಲ ಬೇಗೆ ಒಸ್ತಿ ಇರುವುದರಿಂದ ತಾಯಂದಿರು ಮಕ್ಕಳಿಗೆ ಶುದ್ಧ ನೀರನ್ನು ಆಗಾಗ ಕುಡಿಸುತ್ತಿರಬೇಕು ಎಂದರು.

    ಕಾರ್ಯಕರ್ತೆಯರಾದ ಹುಲಿಗೆಮ್ಮ ಜೋಗಿನ, ಸಾವಿತ್ರಿ ಚಿಂಚಲಿ, ಗೀತಾ ಬೆಟಗೇರಿ, ಆಶಾಗಳಾದ ಹುಲಿಗೆಮ್ಮ, ಯಲ್ಲಮ್ಮ ತಂಬ್ರಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts