More

    ಒಂದು ಅಸಲಿ ನೋಟಿಗೆ 4 ನಕಲಿ ನೋಟು ನೀಡುತ್ತಿದ್ದವರು ಅಂದರ್: ಏನಿದು ಬ್ಲ್ಯಾಕ್ ಪೇಪರ್ ದಂಧೆ..?

    ಬೆಂಗಳೂರು: ಅಮೇರಿಕಾದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಬ್ಲ್ಯಾಕ್ ಪೇಪರ್ ದಂಧೆ, ಇದೀಗ ಭಾರತಕ್ಕೂ ಕಾಲಿಟ್ಟಿದೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ಇದೀದಿ ಸಿಸಿಬಿ ಪೊಲೀಸರು ದಾಳಿ ಮಾಡಿ, ಬ್ಲ್ಯಾಕ್ ಪೇಪರ್ ದಂಧೆಯನ್ನು ಬಯಲಿಗೆಳೆದಿದ್ದಾರೆ.

    ನಕಲಿ ನೋಟಿನ ದಂಧೆ ನಡೆಸುತ್ತಿದ್ದ ಆರೋಪಿಗಳು, ಒಂದು ನೋಟು ನೀಡಿದರೆ ನಾಲ್ಕು ನೋಟು ಆಗುವಂತಹ ಬ್ಲ್ಯಾಕ್ ಪೇಪರ್​ಗಳನ್ನು ಕೊಡುತ್ತಿದ್ದರು. ಜತೆಗೆ ಅಯೋಡಿನ್ ಹಾಗೂ ಕೆಮಿಕಲ್ ನೀಡುತ್ತಿದ್ದರು. ಈ ಕೆಮಿಕಲ್​ನಲ್ಲಿ ಬ್ಲ್ಯಾಕ್​ ಪೇಪರನ್ನು ಅದ್ದಿ ತೆಗೆದರೆ, ಅಸಲಿ ನೋಟಿನಂತೆ ಬದಲಾಗುತ್ತದೆ ಎಂದು ಆರೋಪಿಗಳು ಹೇಳಿಕೊಂಡಿದ್ದರು ಎನ್ನಲಾಗಿದೆ.

    ಆರೋಪಿಗಳು ಒಂದು ನೋಟನ್ನು ಕೊಟ್ಟರೆ, ಅದು ನಾಲ್ಕು ನೋಟ್ ಆಗುವಂತಹ ಬ್ಲ್ಯಾಕ್ ಪೇಪರನ್ನು ನೀಡುತ್ತಿದ್ದರು. ಜತೆಗೆ ಅಯೋಡಿನ್ ಹಾಗೂ ಕೆಮಿಕಲ್ ನೀಡುತ್ತಿದ್ದರು. ಆರೋಪಿಗಳು ದಂಧೆ ನಡೆಸುತ್ತಿದ್ದ ಮನೆಯಿಂದ 500 ರೂ. ಮುಖಬೆಲೆಯ 10,033 ರೂ. ಭಾರತೀಯ ನಕಲಿ ನೋಟುಗಳು ಮತ್ತು 100 ಡಾಲರ್ ಮುಖಬೆಲೆಯ ಒಟ್ಟು 708 ಯು.ಎಸ್.ಎ. ಡಾಲರ್‌ಗಳ ನಕಲಿ ನೋಟುಗಳನ್ನು ಪತ್ತೆ ಹಚ್ಚಿದ್ದಾರೆ. ಈ ಕೃತ್ಯಕ್ಕೆ ಬಳಸಲಾಗುತ್ತಿದ್ದ 1000 ಹಾಳೆಗಳಿರುವ ನೋಟಿನ ಮಾದರಿಯ ಕಪ್ಪು ಬಣ್ಣದ ಹಾಳೆಗಳು, ಬಿಳಿ ಬಣ್ಣದ ನೋಟಿನ ಅಳತೆಯ ಹಾಳೆಗಳು, ವಿವಿಧ ಕೆಮಿಕಲ್ ಬಾಟಲ್‌ಗಳು, ಜತೆಗೆ ಕಲರ್ ಪ್ರಿಂಟರ್ ಹಾಗೂ ಕೆಮಿಕಲ್ ವಶಕ್ಕೆ ಪಡೆದುಕೊಂಡಿದ್ದಾರೆ.

    ಬಂಧಿತರು ಯುಎಸ್​ ಡಾಲರ್​ನ್ನು ಪಡೆದು ಕೂಡಾ ಬ್ಲ್ಯಾಕ್ ಪೇಪರ್ ದಂಧೆ ಮಾಡುತ್ತಿದ್ದರು. ಈ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಂಧೆ ನಡೆಯುತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಮಾಹಿತಿಯಂತೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಇದೀಗ, ಬ್ಲ್ಯಾಕ್ ಪೇಪರ್ ದಂಧೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪೊಲೀಸರು ಪತ್ತೆಗೆ ಬಲೆ ಬೀಸಿದ್ದಾರೆ.

    ಏನಿದು ಬ್ಲಾಕ್‌ಪೇಪರ್ ದಂಧೆ?: ಅಮೆರಿಕ ಡಾಲರ್ ಇನ್ವೆಸ್ಟ್‌ಮೆಂಟ್ :
    ನಕಲಿ ಅಮೆರಿಕನ್ ಡಾಲರ್‌ನ್ನು ಅಸಲಿ ಎಂದು ತೋರಿಸಿ ಕರೆನ್ಸಿ ನೋಟು ಒಂದು ಕೊಟ್ಟರೇ ಬದಲಿಗೆ 10 ಡಾಲರ್ ಕೊಡುವುದಾಗಿ ನಂಬಿಸುತ್ತಿದ್ದರು. ಕೆಲವರಿಗೆ ನಕಲಿ ಡಾಲರ್ ಕೊಟ್ಟು ಕರೆನ್ಸಿ ಪಡೆದು ಮೋಸ ಮಾಡುತ್ತಿದ್ದರು. ಇದನ್ನು ಅಮೆರಿಕನ್ ಡಾಲರ್ ಇನ್ವೆಸ್ಟ್‌ಮೆಂಟ್ ಎನ್ನಲಾಗುತ್ತಿತ್ತು.

    ಬ್ಲಾಕ್ ಬಿಲ್ ಅನ್‌ಮಾಸ್ಕಿಂಗ್:
    ನಕಲಿ ಅಮೆರಿಕನ್ ಡಾಲರ್ ತಯಾರಿಸಿ ಅದರ ಮೇಲೆ ಅಯೋಡಿನ್ ಸಲೂಷನ್ ಸಿಂಪಡಿಸಿದಾಗ ಅದು ಕಪ್ಪು ಬಣ್ಣಕ್ಕೆ ತಿರುಗುತ್ತಿತ್ತು. ಮತ್ತೆ ಅಬ್ಸ್ಕೋರ್ಬಿಕ್ ಆಸಿಡ್ (ವಿಟಮಿನ್ ಸಿ ಮಾತ್ರೆ) ಅನ್ನು ಕಪ್ಪು ಬಣ್ಣದ ನೋಟಿನ ಮೇಲೆ ಹಾಕಿದಾಗ ಮೊದಲ ರೂಪಕ್ಕೆ ತಿರುಗುತ್ತಿತ್ತು. ಇದನ್ನೇ ಬ್ಲಾಕ್ ಬಿಲ್ ಅನ್‌ಮಾಸ್ಕಿಂಗ್ ದಂಧೆ ಎನ್ನಲಾಗುತ್ತದೆ. ನೋಟು ಅಳತೆಯ ಕಪ್ಪು ಕಾಗದದ ಮೇಲೆ ಈ ಕೆಮಿಕಲ್ ಹಾಕಿದರೇ ನೋಟು ಪ್ರಿಂಟ್ ಆಗಲಿದೆ ಎಂದು ಅಮಾಯರಿಕೆ ತೋರಿಸಿ ಅಬ್ಸ್ಕೋರ್ಬಿಕ್ ಆಸಿಡ್ ಹಾಕಿ ನಕಲಿ ಡಾಲರ್ ರೂಪಕ್ಕೆ ತಂದು ಕೆಮಿಕಲ್ ಮಾರಾಟ ಮಾಡುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts