More

    500 ರೂಪಾಯಿಯ ಆರು ನಕಲಿ ನೋಟು ಜಪ್ತಿ

    ದೇವದುರ್ಗ: ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ರೆಡ್ಡೆಪ್ಪ ಪಟ್ಟಣದ ಗೌರಂಪೇಟೆ ನಿವಾಸಿಯಾಗಿದ್ದು, ಈತನಿಂದ ಪೊಲೀಸರು 500ರೂ. ಮುಖಬೆಲೆಯ 6 ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
    ನಕಲಿ ನೋಟು ಖರೀದಿಸಲು ರೆಡ್ಡೆಪ್ಪ 1.01 ಲಕ್ಷ ರೂ. ಅಸಲಿ ನೋಟು ಇಟ್ಟುಕೊಂಡಿದ್ದ. ಜಾಲಹಳ್ಳಿಯಲ್ಲಿ ಅಪರಿಚಿತ ವ್ಯಕ್ತಿಯಿಂದ ನಕಲಿ ನೋಟು ಪಡೆದಿದ್ದು, ಒಂದು ಸಾವಿರ ರೂ. ಅಸಲಿ ನೋಟು ನೀಡಿದರೆ 2 ಸಾವಿರ ನಕಲಿ ಕೊಡುತ್ತಿದ್ದರು ಎಂದು ರೆಡ್ಡೆಪ್ಪ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts