More

    ನಕಲಿ ನೋಟು ಚಲಾವಣೆ; ಆರೋಪಿಗೆ 5 ವರ್ಷ ಸಜೆ, 5 ಸಾವಿರ ದಂಡ

    ಬೆಂಗಳೂರು: ನಕಲಿ ನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನಿಗೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

    ಆರೋಪಿ ಶಹ್ನೋಯಜ್ ಕಸೂರಿ, 82 ಸಾವಿರ ರೂ. ನಕಲಿ ಭಾರತೀಯ ಕರೆನ್ಸಿ ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದನು. ಈ ಸಂಬಂಧ 2018ರಲ್ಲಿ ಚಿಕ್ಕೋಡಿ ಠಾಣೆಯಲ್ಲಿ‌ ಪ್ರಕರಣ ಕೂಡ ದಾಖಲಾಗಿತ್ತು. ಬಳಿಕ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಎನ್ಐಎ, ಐಪಿಸಿ ಸೆಕ್ಷನ್ 120B – ಕ್ರಿಮಿನಲ್ ದುರುದ್ದೇಶ, 489B ನಕಲಿ ನೋಟು ಸೃಷ್ಟಿ, 489C ನಕಲಿ ನೋಟು ಚಲಾವಣೆ ಯತ್ನದಡಿ ಚಾರ್ಜ್ ಶೀಟ್ ಸಲ್ಲಿಸಿತ್ತು.

    ಪ್ರಕರಣದ ವಾದ ಆಲಿಸಿದ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ಆರೋಪಿಗೆ 5 ವರ್ಷ ಸಜೆ ಹಾಗೂ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಅಲ್ಲದೇ ಉಳಿದ ಆರೋಪಿಗಳ ವಿರುದ್ಧ ತನಿಖೆ ಮುಂದುವರೆದಿದೆ.

    250 ಕೋಟಿ ರೂ. ವಂಚನೆ ಪ್ರಕರಣ; ಸ್ಯಾಂಡಲ್​​ವುಡ್​ ಖ್ಯಾತ ನಿರ್ಮಾಪಕನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts