More

    ಜಿಮ್ ಉದ್ಯಮದಿಂದ 27 ಲಕ್ಷ ರೂ. ನಷ್ಟ; ಸಾಲ ತೀರಿಸಲು ರಕ್ತ ಚಂದನದ ಸ್ಮಗ್ಲಿಂಗ್​​ಗಿಳಿದ ವ್ಯಕ್ತಿ ಜೈಲು ಪಾಲು!

    ಬೆಂಗಳೂರು: ಸಾಲ ಪಡೆದುಕೊಂಡ ಮೇಲೆ ತೀರಿಸಬೇಕಾದ್ದು ಕರ್ತವ್ಯ. ಆದರೆ ಇಲ್ಲೊಬ್ಬ ಖದೀಮ, ಸಾಲ ತೀರಿಸಲೆಂದು ಅನ್ಯದಾರಿ ಕಂಡುಕೊಂಡಿದ್ದಾನೆ. ಕಲ್ಲೇಗೌಡ ಎಂಬಾತ ಈ ಹಿಂದೆ ಜಿಮ್ ವ್ಯವಹಾರ ಮಾಡುತ್ತಿದ್ದ. ಜಿಮ್ ವ್ಯವಹಾರವನ್ನು ಆರಂಭಿಸಲು 27 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಆದರೆ ವ್ಯವಹಾರದಲ್ಲಿ ಉಂಟಾದ ನಷ್ಟದಿಂದ ಸಾಲ ತೀರಿಸುವುದು ಕಷ್ಟವಾಗಿತ್ತು.

    ಕಲ್ಲೇಗೌಡ ಆರಂಭಿಸಿದ ಜಿಮ್ ವ್ಯವಹಾರ ಸಂಪೂರ್ಣವಾಗಿ ನಷ್ಟ ಅನುಭವಿಸಿತ್ತು. ಹೀಗಾಗಿ 27 ಲಕ್ಷ ರೂ. ಸಾಲವನ್ನು ತೀರಿಸುವುದು ಸವಾಲಾಗಿತ್ತು. ಇದಕ್ಕಾಗಿ ಈತ ಅನ್ಯದಾರಿಯೊಂದನ್ನು ಕಂಡುಕೊಂಡಿದ್ದ. ಅತ್ಯಂತ ಬೆಲೆಬಾಳುವ ರಕ್ತ ಚಂದನದ ಸ್ಮಗ್ಲಿಂಗ್​ನಲ್ಲಿ ತೊಡಗಿಸಿಕೊಂಡಿದ್ದ.

    ಇದೀಗ ಕಲ್ಲೇಗೌಡ ರಕ್ತಚಂದನದ ಸ್ಮಗ್ಲಿಂಗ್ ಮಾಡಲು ಹೋಗಿ ಪೊಲೀಸರು ಅತಿಥಿಯಾಗಿದ್ದಾನೆ. ಸಾಲ ತೀರಿಸಲು ಸ್ಮಗ್ಲಿಂಗ್​ನಿಂದ ಬೇಗನೆ ಹಣ ಮಾಡುವ ಸಾಹಸಕ್ಕೆ ಕೈ ಹಾಕಿದ್ದ. ಆದರೆ ಈತನ ಆಲೋಚನೆ ತಲೆಕೆಳಗಾಗಿದೆ. ರಕ್ತಚಂದನದ ಮಾರಾಟಕ್ಕೆ ಮುಂದಾಗಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

    ಇದೀಗ ಕಲ್ಲೇಗೌಡನನ್ನು ಬಾಣಸವಾಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಂಧಿತನಿಂದ ಒಂದು ಕಾರು ಹಾಗೂ 12 ಲಕ್ಷ ರೂ. ಮೌಲ್ಯದ ರಕ್ತಚಂದನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts