ಬಹುಕೋಟಿ ಮೇವು ಹಗರಣ; ಲಾಲು ಪ್ರಸಾದ್​ ಯಾದವ್​ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಸಿಬಿಐ

lalu prasad yadav
Published on

ನವದೆಹಲಿ: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಸಿಎಂ, ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್​ ಯಾದವ್​ ಅವರಿಗೆ ಜಾರ್ಖಂಡ್​ ಹೈಕೋರ್ಟ್​ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ.

ಸಿಬಿಐ ಸಲ್ಲಿಸಿರುವ ಮೇಲ್ಮನವಿಯನ್ನು ಆಗಸ್ಟ್​ 25ರಂದು ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ. 950 ಕೋಟಿ ರೂ. ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದಾದ್ಯಂತ ಅನೇಕ ಸರ್ಕಾರಿ ಖಜಾನೆಗಳಿಂದ ಪಶುಗಳ ಮೇವಿನ ಹಣವನ್ನು ದುರುಪಯೋಗಪಡಿಸಿಕೊಂಡಿದೆ. ಇದಕ್ಕೆ ಅನುಕೂಲ ಮಾಡಿಕೊಡಲು ಪಶು ಸಂಗೋಪನಾ ಇಲಾಖೆಯಿಂದ ನಕಲಿ ಬಿಲ್ ನೀಡಲಾಗಿತ್ತು ಎನ್ನಲಾಗಿದೆ.

ಬಹುಕೋಟಿ ಮೇವು ಹಗರಣಕ್ಕೆ(ದುಮ್ಕಾ, ಚೈಬಾಸಾ, ಡೊರಾಂಡಾ, ದಿಯೋಗರ್ ಖಜಾನೆಗಳು) ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಲಾಲು ಪ್ರಸಾದ್​ ಯಾದವ್​ರನ್ನು ಸಿಬಿಐ ನ್ಯಾಯಾಲಯ 2023ರ ಫೆಬ್ರವರಿಯಲ್ಲಿ ದೋಷಿ ಎಂದು ತೀರ್ಪು ನೀಡಿತ್ತು. ಡೊರಾಂಡಾ ಖಜಾನೆ ಪ್ರಕರಣದ 99 ಆರೋಪಿಗಳ ಪೈಕಿ 24 ಮಂದಿಯನ್ನು ಖುಲಾಸೆಗೊಳಿಸಲಾಗಿದ್ದು, ಕಳೆದ ವಾರ 46 ಆರೋಪಿಗಳಿಗೆ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net