ಕಾವೇರಿ ನದಿ ನೀರು ವಿವಾದ: ಇಂದು ರಚನೆ ಆಯ್ತು ತ್ರಿಸದಸ್ಯ ಪೀಠ; ಸದಸ್ಯರ ಮಾಹಿತಿ ಇಲ್ಲಿದೆ..

Supreme Court
Published on

ನವದೆಹಲಿ: ಕರ್ನಾಟಕ ನಿಗದಿತ ಪ್ರಮಾಣದಲ್ಲಿ ನೀರನ್ನು ತಮಿಳುನಾಡಿಗೆ ಬಿಟ್ಟಿಲ್ಲ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು ಇಂದು ತ್ರಿಸದಸ್ಯ ಪೀಠ ರಚನೆ ಮಾಡಿದ್ದಾರೆ.

ನ್ಯಾ.ಬಿ.ಆರ್‌.ಗವಾಯಿ, ನ್ಯಾ.ಪಿ.ಎಸ್‌.ನರಸಿಂಹ ಮತ್ತು ನ್ಯಾ.ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರು ತ್ರಿಸದಸ್ಯ ಪೀಠದ ಸದಸ್ಯರಾಗಿದ್ದಾರೆ. ಶುಕ್ರವಾರದಂದು (ಆ.25) ಈ ನ್ಯಾಯಪೀಠ ಕಾವೇರಿ ವಿವಾದದ ಬಗ್ಗೆ ಎರಡೂ ರಾಜ್ಯಗಳ ವಾದವನ್ನು ಆಲಿಸಲಿದೆ.

ಸೋಮವಾರ ತಮಿಳುನಾಡು ಅರ್ಜಿ ಬಗ್ಗೆ ಪ್ರಸ್ತಾಪಿಸಿದ್ದ ವಕೀಲ ಮುಕುಲ್‌ ರೋಹಟ್ಗಿ, ಈ ಬಗ್ಗೆ ತುರ್ತು ವಿಚಾರಣೆ ಆಗಬೇಕು ಮತ್ತು ಇದಕ್ಕಾಗಿ ಸುಪ್ರೀಂಕೋರ್ಟ್‌ ನ್ಯಾಯಪೀಠ ರಚನೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ್ದ ಸಿಜೆಐ, ನ್ಯಾಯಪೀಠ ರಚನೆ ಮಾಡಿ ವಿಚಾರಣೆಗೆ ಪ್ರಕರಣವನ್ನು ಶೀಘ್ರದಲ್ಲಿ ಪಟ್ಟಿ ಮಾಡಲಾಗುವುದು ಎಂದು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net