ಇವಳನ್ನ ಬಿಟ್ಟಿದ್ದೇ ಒಳ್ಳೇದಾಯ್ತು..!ಪ್ರೇಯಸಿಯ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಪ್ರಿಯಕರ; ವಿಡಿಯೋ ವೈರಲ್ Viral Video
ಹುಡುಗನನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದ ಹುಡುಗಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರೇಯಸಿಗೆ ಕೈಕೊಟ್ಟ ಪ್ರಿಯಕರ
ಹುಡುಗನನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದ ಹುಡುಗಿ
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ವೈರಲ್: ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಣ್ಣ-ಸಣ್ಣ ವಿಷಯಗಳು ಸಹ ಸೋಶಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತವೆ. ಈಗ ಇಂಟರ್ನೆಟ್ನಲ್ಲಿ ವೈರಲ್ (Viral Video) ಆಗುತ್ತಿರುವ ಈ ವೀಡಿಯೋನಲ್ಲಿ ಪ್ರಿಯಕರನೊಬ್ಬನನ್ನು ಆತನ ಪ್ರೇಯಸಿ ರಸ್ತೆ ಮಧ್ಯದಲ್ಲಿ ಥಳಿಸಿರುವ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.
ಆಗಿದ್ದೇನು?
ಈ ವಿಡಿಯೋದಲ್ಲಿರುವ ಹುಡುಗಿ ಮತ್ತು ಹುಡುಗ ಬಹಳ ವರ್ಷಗಳಿಂದ ಒಬ್ಬರನೊಬ್ಬರು ಮೆಚ್ಚಿಕೊಂಡು ಪ್ರೀತಿಯಿಂದ ಇದ್ದರು. ಅ ಹುಡುಗನ ಮೇಲೆ ಈ ಹುಡುಗಿ ಅಪಾರವಾದ ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿದ್ದಳು. ಆದರೆ ಈ ಹುಡುಗ, ಹುಡುಗಿಗೆ ನಂಬಿಕೆ ದ್ರೋಹ ಮಾಡಿದ್ದಾನೆಂದು ಆಕೆಗೆ ಗೊತ್ತಾಗಿದೆ. ಈ ಸಂಹತಿ ತಿಳಿಯುತ್ತಿಂದೆ ನಡುರಸ್ತೆಯಲ್ಲೇ ಯುವತಿ ಆ ಯುವಕನನ್ನು ಮನಬಂದಂತೆ ಥಳಿಸಿದ್ದಾಳೆ.
ರಸ್ತೆಯಲ್ಲಿ ನಡೆದ ಹೈಡ್ರಾಮಾ!
ವಿಡಿಯೋನಲ್ಲಿ, ಆ ಯುವತಿಯು ಹುಡುಗನ ಮೈಮೇಲೆ ಕುಳಿತುಕೊಂಡು ಮನಸೋ ಇಚ್ಛೇ ಹೊಡೆದಿದ್ದಾಳೆ. ಆಕೆಯ ಏಟಿನಿಂದ ಪಾರಾಗಲು ಆತ ಆಕೆಯನ್ನು ತಳ್ಳಿದ್ದಾನೆ. ಆದರೂ ಮತ್ತೆ ಅವನ ಮೇಲೆ ಎರಗಿದ ಯುವತಿ ತನಗಾದ ನೋವನ್ನು ಹಲ್ಲೆ ಮೂಲಕ ತೀರಿಸಿಕೊಂಡಿದ್ದಾಳೆ.
ಇವರಿಬ್ಬರ ಈ ಹೊಡೆದಾಟವು ನಡುರಸ್ತೆಯಲ್ಲಿ ಜರುಗಿದ್ದು, ಪಾದಾಚಾರಿಗಳು ಇವರ ವಿಡಿಯೋವನ್ನು ಸೆರಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಪಬ್ಲಿಕ್ ಹೈಡ್ರಾಮಾ ನೋಡಿದ ಜನ ನಕ್ಕು-ನಕ್ಕು ಸುಸ್ತಾಗಿದ್ದಾರೆ.
ಹೇಗಿದೆ ನೆಟ್ಟಿಗರ ರಿಯಾಕ್ಷನ್!
ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸೋಶಿಯಲ್ ಮೀಡಿಯಾನಲ್ಲಿ ಫುಲ್ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಯನ್ನು ಪಡೆದಿದೆ. ಹಾಗೆಯೇ ತರಾವರಿ ಕಮೆಂಟ್ಗಳು ಹರಿದು ಬಂದಿವೆ. ಆ ಹುಡುಗ ಇವಳನ್ನು ಬಿಟ್ಟಿದ್ದು ಒಳ್ಳೆಯದೇ ಆಯಿತು, ಇಲ್ಲದಿದ್ದರೆ ಜೀವನ ಪರ್ಯಂತ ಏಟನ್ನು ತಿನ್ನುತ್ತಲೇ ಇರುತ್ತಿದ್ದ ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ನೋಡಿ, ಇದನ್ನೇ ನಿಜವಾದ ಸ್ತ್ರೀ ಸಬಲಿಕರಣ ಎನ್ನುವುದು ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ನಿಮ್ಮ ಜಗಳ ಏನೇ ಇದ್ದರು ಅದನ್ನು ನಿಮ್ಮ ಮನೆಯಲ್ಲಿ ಪರಿಹಾರ ಮಾಡಿಕೊಳ್ಳಿ, ಹೀಗೆ ಬೀದಿಯಲ್ಲಿ ಹೊಡೆದು ಕೊಳ್ಳುವುದು ಎಷ್ಟು ಸರಿ? ಎಂದು ಮತ್ತೊಬ್ಬರು ತಿಳಿ ಹೇಳಿದ್ದಾರೆ, (ಏಜನ್ಸೀಸ್).