'ಪಾತ್ರ ಬದಲಾವಣೆ ಬಗ್ಗೆ ಮಾಹಿತಿಯೇ ಇಲ್ಲ'; ಭಾರ್ಗವಿ LLBಯಿಂದ ಸುಜಾತ ಅಕ್ಷಯ್ ಹೊರಬಂದಿದ್ಯಾಕೆ ಎಂಬ ಪ್ರಶ್ನೆಗೆ ಸ್ಪಷ್ಟನೆ..Sujata Akshay
Sujata Akshay Bhargavi LLB
Published on:
Copied
Follow Us
Sujata Akshay Bhargavi LLB: ಕನ್ನಡ ಸೀರಿಯಲ್ ನಟಿ ಸುಜಾತ ಅಕ್ಷಯ್ ಅವರು ಭಾರ್ಗವಿ ಎಲ್ಎಲ್ಬಿ ಸೀರಿಯಿಲ್ನಿಂದ ಹೊರಬಂದಿದ್ದಾರೆ. ನಿರ್ಮಲಾ ಪಾಟೀಲ್ ಪಾತ್ರಕ್ಕೆ ನಟಿ ಸ್ವಾತಿ ಅವರು ಆಯ್ಕೆಯಾಗಿದ್ದಾರೆ ಎನ್ನುವ ಪೋಸ್ಟರ್ಗಳು ಇನ್ಸ್ಟಾಗ್ರಾಮ್ನಲ್ಲಿ ಹರಿದಾಡುತ್ತಿದ್ದವು. ಈ ಬಗ್ಗೆ ಖುದ್ದಾಗಿ ಸುಜಾತಾ ಅವರೇ ಮಾತನಾಡಿದ್ದು, ಪಾತ್ರ ಬದಲಾವಣೆ ಬಗ್ಗೆ ಮಾಹಿತಿಯೇ ಇಲ್ಲ ಎನ್ನುವ ಶಾಕಿಂಗ್ ಮಾಹಿತಿ ನೀಡಿದ್ದಾರೆ.
ನಾನು ಆರಾಮಾಗಿದ್ದೇನೆ
'ನಾನು ಈಗ ಬ್ಯಾಂಕಾಂಕ್ನ ಸುವರ್ಣ ಭೂಮಿ ಏರ್ಪೋರ್ಟ್ನಲ್ಲಿದ್ದೇನೆ. ಬೆಂಗಳೂರಿಗೆ ಹೊರಟಿದ್ದೇನೆ. ಸದ್ಯ ಇಲ್ಲಿಂದಲೇ ವಿಡಿಯೋ ಮಾಡುತ್ತಿರುವುದು ಯಾಕೆಂದರೆ, ನನಗೆ ಸಾಕಷ್ಟು ಮೆಸೇಜ್ ಬಂದವು ಭಾರ್ಗವಿ ಎಲ್ಎಲ್ಬಿ ಸೀರಿಯಲ್ನಲ್ಲಿ ನಿರ್ಮಲಾ ಪಾಟೀಲ್ ಪಾತ್ರ ರಿಪ್ಲೇಸ್ ಆಗಿದೆ. ವೈಯಕ್ತಿಕ ಕಾರಣದಿಂದ ಸುಜಾತ ಅವರು ಸೀರಿಯಲ್ನಿಂದ ಹೊರನಡೆದಿದ್ದಾರೆ' ಎಂದು ಟ್ರೋಲ್ ಪೇಜಸ್ಗಳು ಪೋಸ್ಟ್ ಮಾಡಿದ್ದವು.
'ಹಲವರು ನನಗೆ ಖುದ್ದಾಗಿ ಮೆಸೇಜ್ ಮಾಡಿದ್ದೀರಿ. ಏನಾಯ್ತು?, ಆರಾಮಾಗಿ ಇದ್ದೀರಾ?, ಆರೋಗ್ಯ ಹೇಗಿದೆ ಎಂದು. ನಾನು ತುಂಬಾ ಚೆನ್ನಾಗಿದ್ದೀನಿ. ನಾನು ನನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದೆ. ಇದು ಪ್ಲಾನ್ಡ್ ವೆಕೇಶನ್' ಎಂದು ಹೇಳಿಕೊಂಡಿದ್ದಾರೆ.
📄 Embedded Content
ಈ ನಿರ್ಧಾರ ಯಾಕೆ ತಗಂಡ್ರೋ ಗೊತ್ತಿಲ್ಲ
ಮುಂದುವರೆದು, 'ನನಗೆ ಚಾನೆಲ್ ಗೌರವಿಸಿದೆ. ಆದರೆ, ಪ್ರೊಡಕ್ಷನ್ ಹೌಸ್ನವರು ಈ ನಿರ್ಧಾರ ತೆಗೆದುಕೊಂಡಿರುವುದು ಯಾಕೆ ಎಂದು ತಿಳಿದಿಲ್ಲ. ಡೇಟ್ ಕೇಳಲಿಲ್ಲ. ಶೂಟಿಂಗ್ಗೆ ಬನ್ನಿ ಎಂದು ಕರೆಯಲಿಲ್ಲ. ಈ ಮಧ್ಯೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಭಾರ್ಗವಿ ಎಲ್ಎಲ್ಬಿ ಶುರುವಾಗಿ ಒಂದು ವರ್ಷ 8ತಿಂಗಳಾಗಿದೆ. ನಿರ್ಮಲಾ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದೇನೆ. ಈ ಪಾತ್ರಕ್ಕೆ ಹಲವರ ಬೆಂಬಲವೂ ಸಿಕ್ಕಿದೆ' ಎಂದು ಮಾತನಾಡಿದ್ದಾರೆ.
'ನಿಮ್ಮ ಪ್ರೀತಿ, ಆಶೀರ್ವಾದ ಸದಾ ಹೀಗೆ ಇರಲಿ. ಮುಂದೆ ಹೊಸ ಪ್ರಾಜೆಕ್ಟ್ ಜೊತೆಗೆ ಬರುತ್ತೇನೆ. ನನ್ನ ಪಾತ್ರ ಈಗ ಯಾರು ನಿಭಾಯಿಸುತ್ತಾರೆಯೋ ಅವರಿಗೆ ಆಲ್ದಿ ಬೆಸ್ಟ್. ಚೆನ್ನಾಗಿ ಮಿಂಚಲಿ ಎಂದು ನಾನು ಆಶಿಸುತ್ತೇನೆ' ಎಂದಿದ್ದಾರೆ.
ಸ್ವಾತಿ ಯಾರು?
ಭಾರ್ಗವಿ ಎಲ್ಎಲ್ಬಿಯಲ್ಲಿ ನಿರ್ಮಲಾ ಪಾತ್ರಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ನಟಿ ಸ್ವಾತಿಯವರು ಈ ಹಿಂದೆ ಪುಟ್ಟಕ್ಕನ ಮಕ್ಕಳು ಹಾಗೂ ಕನ್ಯಾ ಕುಮಾರಿ ಸೀರಿಯಲ್ನಲ್ಲಿ ನಟಿಸಿದ್ದರು ಎನ್ನಲಾಗಿದೆ.
ಸುಜಾತ ಅಕ್ಷಯ್ ಅವರು ನಟಿಸಿದ ಸೀರಿಯಲ್, ಸಿನಿಮಾಗಳಿವು
ಮಂಗಳ ಗೌರಿ ಮದುವೆ, ರಾಧಾ ರಮಣ, ಲಕ್ಷ್ಮಿ ಬಾರಮ್ಮ, ಕಾವ್ಯಾಂಜಲಿ, ಅಶ್ವಿನಿ ನಕ್ಷತ್ರ, ಅಮ್ಮಾಜಿ, ಹೂಮಳೆ ಸೇರಿದಂತೆ ಹಲವು ಸೀರಿಯಲ್ನಲ್ಲಿ ಖಳನಾಯಕಿ ಪಾತ್ರ ಸೇರಿದಂತೆ, ಪೋಷಕ ನಟಿ ಪಾತ್ರದಲ್ಲಿ ನಟಿಸಿದ್ದಾರೆ, (ಏಜೆನ್ಸೀಸ್).