ಬಂಗಾಳ ಸಮರಕ್ಕೆ ಬಿಜೆಪಿ ಸಜ್ಜು: ಮಮತಾ ವಿರುದ್ಧ ಕಣಕ್ಕಿಳಿದ ಸುವೇಂದು ಅಧಿಕಾರಿ; 144 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ ಕೇಸರಿ ಪಡೆ! West Bengal Election

West Bengal Election
West Bengal Election
Published on

ಪ್ರಮುಖ ಮುಖ್ಯಾಂಶಗಳು

  • ಪಂಚರಾಜ್ಯ ಚುನಾವಣೆಯನ್ನು ಫೋಷಿಸಿದ ಕೇಂದ್ರ ಚುನಾವಣಾ ಆಯೋಗ
  • ಏಪ್ರಿಲ್​ 23 ಮತ್ತು 25 ರಂದು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ
  • ಬಿಜೆಪಿಯಿಂದ 144 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
  • ಮಮತಾ ವಿರುದ್ಧ ಸುವೇಂದು ಅಧಿಕಾರಿ ಕಣಕ್ಕೆ
ಪಶ್ಚಿಮ ಬಂಗಾಳ: ದೇಶದ ನಾಲ್ಕು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಯನ್ನು ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ತಿಳಿಸಿದ್ದು, ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಭಾನುವಾರದಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ವಿವೇಕ್ ಜೋಶಿ ಹಾಗೂ ಸುಖ್​ಬೀರ್ ಸಿಂಗ್ ಸಂಧು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ವೇಳಾಪಟ್ಟಿ ಹೊರ ಬೀಳುತ್ತಿದ್ದಂತೆ ಪಶ್ಚಿಮ ಬಂಗಾಳ (West Bengal Election) ಬಿಜೆಪಿ, ತನ್ನ 144 ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ (ಮಾ.16) ಬಿಡುಗಡೆ ಮಾಡಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಬಿಜೆಪಿಯ ಸುವೇಂದು ಅಧಿಕಾರಿ ಭಬಾನಿಪುರದಿಂದ ಸ್ಪರ್ಧಿಸಲಿದ್ದು, ಭಬಾನಿಪುರದಿಂದ ಸಹ ಅಧಿಕಾರಿ ಕಣಕ್ಕೀಳಿಯಲಿದ್ದಾರೆ.
ಬಿಜೆಪಿಯಿಂದ ಕಣದಲ್ಲಿರುವ ಪ್ರಮುಖರು
1. ನಂದಿಗ್ರಾಮ - ಸುವೇಂದು ಅಧಿಕಾರಿ
2. ಅಸನ್ಸೋಲ್ ದಕ್ಷಿಣ್ - ಅಗ್ನಿಮಿತ್ರ ಪಾಲ್
3. ಶಿಬ್ಪುರ - ರುದ್ರನೀಲ್ ಘೋಷ್
4. ಉಲುಬೇರಿಯಾ - ಸ್ವಾಮಿ ಮಂಗಳಾನಂದ ಪುರಿ ಮಹಾರಾಜ್
5. ಚಕ್ದಾಹ - ಬಂಕಿಮ್ ಚಂದ್ರ ಘೋಷ್
6. ಪಾನ್ಸ್ಕುರಾ - ಸುಬ್ರತ ಮೈತ್ರಾ/ತ್ರಿ
7. ದೇಗಂಗಾ - ತರುಣ್ ಕಾಂತಿ ಘೋಷ್

ಬಂಗಾಳ ಚುನಾವಣೆ

ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ 294 ಸ್ಥಾನಗಳಿಗೆ ಚುನಾವಣೆಯು ಎರಡು ಹಂತದಲ್ಲಿ ನಡೆಯಲಿದ್ದು, ಏಪ್ರಿಲ್​ 23 ಮತ್ತು ಏಪ್ರಿಲ್ 29 ರಂದು ಮತದಾನ ನಡೆಯಲಿದೆ. ಮತ ಏಣಿಕೆಯು ಮೇ 4 ರಂದು ನಡೆಯಲಿದ್ದು ಆ ದಿನವೇ ಫಲಿತಾಂಶ ಹೊರ ಬೀಳಲಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net