ಸಮಂತಾ-ರಾಜ್ ನಿಧಿಮೋರು ಮದುವೆಯ 'ಅನ್ಸೀನ್' ಫೋಟೋ ವೈರಲ್: ಕೊಯಮತ್ತೂರಿನ ಆ ಸುಂದರ ಕ್ಷಣ ಹಂಚಿಕೊಂಡ ನಟಿ! Samantha Ruth Prabhu

Samantha Ruth Prabhu (ಚಿತ್ರ Instagram)
Samantha Ruth Prabhu (ಚಿತ್ರ Instagram)
Published on
Samantha Ruth Prabhu: ಟಾಲಿವುಡ್​ ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಡಿಸೆಂಬರ್​ 1, 2025 ರಂದು ಕೊಯಮತ್ತೂರಿನಲ್ಲಿ ಅತ್ಯಂತ ಆತ್ಮೀಯವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ನಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಈವರೆಗೂ ನೋಡಿರದ ವಿಶೇಷ ಕ್ಷಣದ ಪೋಟೋವನ್ನು ಹಂಚಿಕೊಂಡಿದ್ದಾರೆ.

ಸಮಂತಾ ಅವರ ಪೋಸ್ಟ್ ಬಗ್ಗೆ

ಪೋಸ್ಟ್​ನಲ್ಲಿ ಸಮಂತಾ ಮತ್ತು ರಾಜ್ ತಮ್ಮ ಮದುವೆಯ ಉಡುಪನ್ನು ಧರಿಸಿ ಕ್ಯಾಮೆರಾ ಮುಂದೆ ತಮ್ಮ ಸುಂದರವಾದ ನಗುವನ್ನು ಹೊರಹಾಕುತ್ತಿರುವುದನ್ನು ಕಾಣಬಹುದಾಗಿದೆ.
ಮದುವೆಗೆ ಸಮಂತಾ ಕೆಂಪು ಬನಾರಸಿ ಸೀರೆಯನ್ನು ಆರಿಸಿಕೊಂಡಿದ್ದರು. ಸಮಾರಂಭದ ನಂತರ, ಡಿಸೈನರ್ ಅರ್ಪಿತಾ ಮೆಹ್ತಾ, ಸಮಂತಾ ಅವರ ಮದುವೆಯ ಲುಕ್‌ನ ವಿವರಗಳನ್ನು ಹಂಚಿಕೊಂಡರು.
ಇದು ನಮ್ಮ ಮೊಟ್ಟ ಮೊದಲ ಕಸ್ಟಮ್ ಕೆಂಪು ಬನಾರಸಿ ಸೀರೆಯಾಗಿದೆ. ಇದು ಸರಳವಾದ ಸೀರೆಯಾದರೂ ಉತ್ತಮ ದರ್ಜೆಯಾಗಿದೆ. ಈ ಸೀರೆಯು ಮದುವೆಯ ನೋಟವನ್ನು ಹೆಚ್ಚಿಸಿದಲ್ಲದೇ, ಆತ್ಮೀಯತೆ ಮತ್ತು ಐಷಾರಾಮಿ ಭಾವನೆ ಮೂಡಿಸುತ್ತದೆ ಎಂದು ಅವರು ಬರೆದಿದ್ದಾರೆ.
ಈ ಬ್ಲೌಸ್ ಕಲಾವಿದೆ ಜಯತಿ ಬೋಸ್ ವಿನ್ಯಾಸಗೊಳಿಸಿದ್ದು, ಇದು ಆಳವಾದ ಸಾಗರ ತಳದಲ್ಲಿ ಬೇರೂರಿರುವ ಮತ್ತು ದೇವಿಯ ಆನಂದದಾಯಕ ನೋಟದಿಂದ ಕಿರೀಟಧಾರಣೆಗೊಂಡಿರುವ ಜಮ್ದಾನಿ ಜೀವನದ ಮರವನ್ನು ಹೊಂದಿದೆ. ಇದು ದೇವತೆಯ ಕಾವಲು ಕಣ್ಣಿನಿಂದ ಆಶೀರ್ವದಿಸಲ್ಪಟ್ಟ ಪವಿತ್ರ ಒಕ್ಕೂಟವನ್ನು ಆಚರಿಸುವ ಸಂಕೇತವಾಗಿದೆ ಎಂದು ಅರ್ಪಿತ ಹೇಳಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಅರ್ಪಿತಾ ಸೀರೆಯನ್ನು ಕುಶಲಕರ್ಮಿಯೊಬ್ಬರು ಎರಡು ವಾರಗಳ ಕಾಲ ನೇಯ್ದಿದ್ದಾರೆ. ಈ ಸೀರೆಯು ಪೌಡರ್ ಜರಿ ಬುಟ್ಟಿಗಳನ್ನು ಹೊಂದಿದ್ದು, ಸಂಕೀರ್ಣವಾದ ಕಟ್ವರ್ಕ್‌ನಲ್ಲಿ ನಿಶಿ ನೇಯ್ದ ಗಡಿಯನ್ನು ಒಳಗೊಂಡಿದೆ. ಬೀಜ್ ಚಿನ್ನದ ಜರ್ಡೋಜಿ-ಸಾದಿ ಟಾರ್, ಕಟ್ಡಾನಾ ಮತ್ತು ಕಸಬ್ ಕೆಲಸಗಳು ಸೀರೆಗೆ ರಾಜಮನೆತನದ ಕಳೆಯನ್ನು ನೀಡಿವೆ. ಆದಾಗ್ಯೂ, ಸಣ್ಣ ಕನ್ನಡಿಯಿಂದ ಮಾಡಲಾದ ಅಲಂಕಾರವು ಸೀರೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ, ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರು ಅವರ ವಿವಾಹದ ಸುದ್ದಿ ಎಷ್ಟು ಸಂಚಲನ ಮೂಡಿಸಿದೆಯೋ, ಅವರ ಪ್ರೇಮಕಥೆ ಶುರುವಾದ ಬಗೆಯೂ ಅಷ್ಟೇ ಕುತೂಹಲಕಾರಿಯಾಗಿತ್ತು.
ಆದಾಗ್ಯೂ, ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 'ವರ್ಲ್ಡ್ ಪಿಕಲ್ ಬಾಲ್ ಲೀಗ್'ನ ಫೋಟೋಗಳನ್ನು ಹಂಚಿಕೊಂಡಾಗ ಅಭಿಮಾನಿಗಳ ಗಮನ ಸೆಳೆದಿದ್ದರು. ಈ ವೇಳೆ ದಂಪತಿ, 'ಚೆನ್ನೈ ಸೂಪರ್ ಚಾಂಪಿಯನ್ಸ್' ತಂಡವನ್ನು ಹುರಿದುಂಬಿಸುತ್ತಿದ್ದರು. ಇಬ್ಬರೂ ಒಟ್ಟಾಗಿ ಪಂದ್ಯವನ್ನು ಆನಂದಿಸುತ್ತಿದ್ದ ರೀತಿ ಮತ್ತು ಅವರ ನಡುವಿನ ಆತ್ಮೀಯತೆ ನೋಡಿ, ಇವರಿಬ್ಬರು ಕೇವಲ ವೃತ್ತಿಪರ ಸ್ನೇಹಿತರಲ್ಲ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ವೇಗವಾಗಿ ಹರಡಿತು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net