ಭಾವಿ ಪತಿಯ ಕೈಹಿಡಿದ ಅನುಷ್ಕಾ, ಸೀಕ್ರೆಟ್​ ಆಗಿ ನಡೆಯಿತಾ ನಿಶ್ಚಿತಾರ್ಥ? ವೈರಲ್​ ವಿಡಿಯೋದ ಅಸಲಿ ಸತ್ಯ ಇಲ್ಲಿದೆ...Anushka Shetty

ಭಾವಿ ಪತಿಯ ಕೈಹಿಡಿದ ಅನುಷ್ಕಾ, ಸೀಕ್ರೆಟ್​ ಆಗಿ ನಡೆಯಿತಾ ನಿಶ್ಚಿತಾರ್ಥ? ವೈರಲ್​ ವಿಡಿಯೋದ ಅಸಲಿ ಸತ್ಯ ಇಲ್ಲಿದೆ...Anushka Shetty
ಭಾವಿ ಪತಿಯ ಕೈಹಿಡಿದ ಅನುಷ್ಕಾ, ಸೀಕ್ರೆಟ್​ ಆಗಿ ನಡೆಯಿತಾ ನಿಶ್ಚಿತಾರ್ಥ? ವೈರಲ್​ ವಿಡಿಯೋದ ಅಸಲಿ ಸತ್ಯ ಇಲ್ಲಿದೆ...Anushka Shetty
Published on

ಪ್ರಮುಖ ಮುಖ್ಯಾಂಶಗಳು

  • ನಟಿ ಅನುಷ್ಕಾ ಶೆಟ್ಟಿ ಬಗ್ಗೆ ವಿಶೇಷವಾಗಿ ಪರಿಚಯಿಸುವ ಅಗತ್ಯವೇ ಇಲ್ಲ
  • ಬಾಹುಬಲಿ ಸರಣಿಯ ಮೂಲಕ ಜಾಗತಿಕ ಮಟ್ಟದಲ್ಲಿ ಅನುಷ್ಕಾ ಹೆಸರು ಪ್ರಖ್ಯಾತಿಯಾಗಿದೆ
  • ಅನುಷ್ಕಾ ಅವರು ತಮ್ಮ 44ನೇ ವಯಸ್ಸಿನಲ್ಲೂ ಬ್ಯಾಚುಲರ್​ ಆಗಿಯೇ ಉಳಿದಿದ್ದಾರೆ
  • ಹೀಗಾಗಿ, ಸಿನಿಮಾಗಿಂತ ಅವರ ಮದುವೆ ವಿಚಾರವೇ ಹೆಚ್ಚು ಸುದ್ದಿಯಾಗುತ್ತಿರುತ್ತದೆ
Anushka Shetty : ನಟಿ ಅನುಷ್ಕಾ ಶೆಟ್ಟಿ ಬಗ್ಗೆ ವಿಶೇಷವಾಗಿ ಪರಿಚಯಿಸುವ ಅಗತ್ಯವೇ ಇಲ್ಲ. ಬಾಹುಬಲಿ ಸರಣಿಯ ಮೂಲಕ ಜಾಗತಿಕ ಮಟ್ಟದಲ್ಲಿ ಅನುಷ್ಕಾ ಹೆಸರು ಪ್ರಖ್ಯಾತಿಯಾಗಿದೆ. ಚಿತ್ರರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಅನುಷ್ಕಾ, 44ನೇ ವಯಸ್ಸಿನಲ್ಲೂ ಬ್ಯಾಚುಲರ್​ ಆಗಿಯೇ ಉಳಿದಿದ್ದಾರೆ. ಹೀಗಾಗಿ, ಸಿನಿಮಾಗಿಂತ ಅವರ ಮದುವೆ ವಿಚಾರವೇ ಹೆಚ್ಚು ಸುದ್ದಿಯಾಗುತ್ತಿರುತ್ತದೆ. ಬೆಂಗಳೂರು ಮೂಲದ ಉದ್ಯಮಿ ಜತೆ ಶೀಘ್ರದಲ್ಲೇ ಅನುಷ್ಕಾ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಇದರ ನಡುವೆ ವಿಡಿಯೋವೊಂದು ವೈರಲ್​ ಆಗುತ್ತಿದ್ದು, ಅನುಷ್ಕಾ ಅವರು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿಯನ್ನು ಹರಿಬಿಡಲಾಗಿದೆ. 
ವೈರಲ್​​ ಆಗುತ್ತಿರುವ ವಿಡಿಯೋದಲ್ಲಿ, ಅನುಷ್ಕಾ ಅವರು ವ್ಯಕ್ತಿಯೊಬ್ಬನ ಕೈ ಹಿಡಿದು ವೇದಿಕೆ ಒಂದರ ಮೇಲೆ ನಡೆಯುತ್ತಿದ್ದಾರೆ. ಅಲ್ಲದೆ, ಇಬ್ಬರು ನಮಸ್ಕಾರ ಸಹ ಮಾಡುತ್ತಾರೆ. ವಿಡಿಯೋದಲ್ಲಿರುವ ವ್ಯಕ್ತಿಯೇ ಅನುಷ್ಕಾ ಅವರ ಭಾವಿ ಪತಿ ಎಂಬ ವದಂತಿಯನ್ನು ಹರಿಬಿಡಲಾಗಿದೆ. ಅನುಷ್ಕಾ ಅವರು ರಹಸ್ಯವಾಗಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ಅವರ ಭಾವಿ ಪತಿ ಇವರೇ ನೋಡಿ ಎಂದು ವಿಡಿಯೋವನ್ನು ವೈರಲ್​ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ ಸೈಬರ್ ಜಗತ್ತು ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎಂಬ ಹುಡುಕಾಟದಲ್ಲಿ ತೊಡಗಿದೆ. ಆದರೆ, ಅಸಲಿ ಸಂಗತಿ ಏನೆಂದರೆ, ಈ ವಿಡಿಯೋವನ್ನು ಎಂಟು ವರ್ಷಗಳ ಹಿಂದೆಯೇ ಸೆರೆಹಿಡಿಯಲಾಗಿದೆ. 

ವೈರಲ್​ ವಿಡಿಯೋ ಅಸಲಿ ಸತ್ಯ ಏನು?

ಅಂದಹಾಗೆ, ಇದು 2016 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಫ್ಯಾಷನ್ ಶೋನ ವಿಡಿಯೋ. ಈ ಜೋಡಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದೆ ಎಂದು ಹರಿದಾಡುತ್ತಿರುವ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಎಂಟು ವರ್ಷಗಳ ಹಿಂದೆ ನಡೆದ ಫ್ಯಾಷನ್ ಶೋವೊಂದರಲ್ಲಿ ಅನುಷ್ಕಾ ಅವರು ಡಿಸೈನರ್ ಜೊತೆ ರ‍್ಯಾಂಪ್ ವಾಕ್ ಮಾಡುತ್ತಿರುವ ವಿಡಿಯೋವನ್ನು ಈಗ ನಿಶ್ಚಿತಾರ್ಥ ಎಂದು ಪ್ರಸಾರ ಮಾಡಲಾಗುತ್ತಿದೆ. ಅನುಷ್ಕಾ ಅವರಾಗಲಿ ಅಥವಾ ಅವರ ಕುಟುಂಬದವರಾಗಲಿ ಅನುಷ್ಕಾ ಮದುವೆ ಅಥವಾ ನಿಶ್ಚಿತಾರ್ಥದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. 

ಅನುಷ್ಕಾ ಶೆಟ್ಟಿ ಗರಂ 

ಈಗಾಗಲೇ ಹರಿದಾಡುತ್ತಿರುವ ವದಂತಿಯ ಬಗ್ಗೆ ಅನುಷ್ಕಾ ಅವರು ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ನನ್ನ ಮದುವೆ ವಿಚಾರವಾಗಿ ಹರಿದಾಡುತ್ತಿರುವ ಸುದ್ದಿಗಳೆಲ್ಲ ಆಧಾರರಹಿತ ಎಂದು ಹೇಳಿದ್ದಾರೆ. ಇಂತಹ ಸುಳ್ಳು ಮಾಹಿತಿಯನ್ನು ನಂಬಬಾರದು ಮತ್ತು ದೃಢೀಕರಿಸದ ಸುದ್ದಿಗಳನ್ನು ಹರಡಬಾರದು ಎಂದು ಅನುಷ್ಕಾ ಶೆಟ್ಟಿ ಅವರ ಟೀಮ್​ ಮನವಿ ಮಾಡಿದೆ. ಆಧಾರರಹಿತ ಸುದ್ದಿಗಳನ್ನು ಹರಡುವುದು ಪತ್ರಿಕೋದ್ಯಮದ ಗಡಿಗಳನ್ನು ಉಲ್ಲಂಘಿಸುತ್ತದೆ. ಅಧಿಕೃತ ಮಾಹಿತಿಗಾಗಿ ಕಾಯದೆ, ಯಾರೊಬ್ಬರ ಖಾಸಗಿ ಜೀವನದ ಬಗ್ಗೆ ಸುದ್ದಿ ಮಾಡುವುದು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಆಕ್ರಮಣವಾಗಿದೆ. ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು ಮತ್ತು ವ್ಯಕ್ತಿಯ ಗೌಪ್ಯತೆಗೆ ಸಂಬಂಧಿಸಿದ ವಿಷಯಗಳನ್ನು ದೈನಂದಿನ ಸುದ್ದಿಗಳನ್ನಾಗಿ ಮಾಡಬಾರದು ಎಂದು ಅನುಷ್ಕಾ ಅವರ ಟೀಮ್​ ಒತ್ತಾಯಿಸಿದೆ. ಅನುಷ್ಕಾ ಶೆಟ್ಟಿ ಅವರು ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಯಾವಾಗಲೂ ಘನತೆ ಮತ್ತು ಗೌರವವನ್ನು ಕಾಯ್ದುಕೊಂಡಿದ್ದಾರೆ. ಖ್ಯಾತಿಗಾಗಿ ಅವರು ಎಂದಿಗೂ ಪ್ರಚಾರದ ಗಿಮಿಕ್‌ಗಳನ್ನು ಅವಲಂಬಿಸಿಲ್ಲ. ಅವರು ತಮ್ಮ ಖಾಸಗಿ ಜೀವನವನ್ನು ಖಾಸಗಿಯಾಗಿಡಲು ಬಯಸುವವರು. ಮದುವೆ ಎಂಬುದು ವೈಯಕ್ತಿಕ ನಿರ್ಧಾರವಾಗಿದೆ. ಅದನ್ನು ಸುದ್ದಿ ಮತ್ತು ಕ್ಲಿಕ್‌ಗಳಿಗಾಗಿ ಬಳಸಬಾರದು. ವ್ಯಕ್ತಿಯ ಗೌಪ್ಯತೆಯನ್ನು ಗೌರವಿಸುವುದು ಅತ್ಯಂತ ಮುಖ್ಯವಾದ ವಿಷಯ. ಮದುವೆಯಂತಹ ವಿಷಯಗಳಲ್ಲಿ ಅಧಿಕೃತ ಘೋಷಣೆ ಬರುವವರೆಗೆ ಮಾಧ್ಯಮಗಳು ಕಾಯಬೇಕು ಎಂದು ಹೇಳುವ ಮೂಲಕ ಅನುಷ್ಕಾ ಅವರ ತಂಡ ವದಂತಿಗಳಿಗೆ ತೆರೆ ಎಳೆದಿದೆ. 
ಅಂದಹಾಗೆ, ಅನುಷ್ಕಾ ಶೆಟ್ಟಿ ಈ ವರ್ಷ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ತಮ್ಮ ಕುಟುಂಬಕ್ಕೆ ಪರಿಚಿತರಾಗಿರುವ ಉದ್ಯಮಿಯ ಜತೆ ಅನುಷ್ಕಾ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಇದೆ. ಆದರೆ, ಅನುಷ್ಕಾ ಶೆಟ್ಟಿ ಅವರು ಇದನ್ನು ತಳ್ಳಿಹಾಕಿದ್ದಾರೆ. ಇನ್ನು ಅನುಷ್ಕಾ ಅವರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವುದು ಇದೇ ಮೊದಲಲ್ಲ. ಅನುಷ್ಕಾ ಮತ್ತು ನಟ ಪ್ರಭಾಸ್ ಬಾಹುಬಲಿ ಸಿನಿಮಾದ ಆರಂಭದಿಂದಲೂ ಪ್ರೀತಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಈ ಹಿಂದೆ ಹಬ್ಬಿದ್ದವು. ಆದರೆ, ಇಬ್ಬರು ಇದನ್ನು ನಿರಾಕರಿಸಿದರು. ಇದಿಷ್ಟೇ ಅಲ್ಲದೆ, ಅನುಷ್ಕಾ ಅವರು ದುಬೈನ ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ ಎಂಬ ಮಾಹಿತಿ ಕೂಡ ಹರಿದಾಡಿತ್ತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net