ವಿದಿತ್ ಶರ್ಮಾ ಎಂಬುವವರು ಬೀದಿ ನಾಯಿಯೊಂದು ಆಹಾರವಿಲ್ಲದೆ ಬೀದಿ ಬೀದಿ ಅಲೆಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ದಕ್ಷಿಣ ಭಾರತದ ಯಾವುದೋ ರಾಜ್ಯದಲ್ಲಿರುವ ನಾಯಿ ಲ್ಯಾಬ್ರಡಾರ್ ಪ್ರಭೇದದ ನಾಯಿಯಂತೆ ಕಾಣುತ್ತಿದೆ. ಒಬ್ಬ ಗಾಡಿಯವ ಬೇಕೆಂದು ನಾಯಿಗೆ ಡಿಕ್ಕಿ ಹೊಡೆಯಲು ಹೋಗುತ್ತಾನೆ. ಅದು ಆಗ ಭಯದಿಂದ ಓಡಿ ಹೋಗುತ್ತಿದೆ. ಆ ನಾಯಿಯಲ್ಲಿರುವ ಭಯ, ಅಸಹಾಯಕತೆ, ನೋವು ಎಲ್ಲವೂ ಕರುಳು ಕಿವುಚುವಂತೆ ಮಾಡುತ್ತಿದೆ. ದಯವಿಟ್ಟು ಈ ವಿಡಿಯೋ ಶೇರ್ ಮಾಡಿ, ಪ್ರಾಣಿಗಳ ಮೇಲೆ ದಯೆ ಇರಲಿ. ನಾಯಿಯನ್ನು ಹುಡುಕಿ ರಕ್ಷಿಸಿ ಎಂದು ಹಂಚಿಕೊಂಡಿದ್ದಾರೆ.