ಫ್ಲೈ 91 ವಿಮಾನವು ಏಪ್ರಿಲ್ 2ನೇ ವಾರದಿಂದ ಹೈದರಾಬಾದ್, ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಸೇವೆಯನ್ನು ನೀಡುತ್ತಿದೆ. ಭಾನುವಾರ(ಏ.19)ರಂದು ಹೈದರಾಬಾದ್ನಿಂದ ಮಧ್ಯಾಹ್ನ 3ಗಂಟೆಗೆ ಟೇಕ್ ಆಗಿದ್ದ ವಿಮಾನ ಸಂಜೆ 4:30ಗೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದ ಆಗಸದಲ್ಲೇ 4 ಗಂಟೆ ಕಾಲ ಕಳೆದು ನಂತರ ಬೆಂಗಳೂರು ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಿದೆ.