ಕೊಳೆತ ಮಾಂಸ, ಅವಧಿ ಮೀರಿದ ಹಾಲು... ಆಹಾರ ಇಲಾಖೆಯ ದಾಳಿ​ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಹೋಟೆಲ್​ ಲಲಿತ್ ಅಶೋಕ್​ ​

ಆರೋಗ್ಯ ಇಲಾಖೆಯ ದಾಳಿ​ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಹೋಟೆಲ್​ ಲಲಿತ್ ಅಶೋಕ್​
ಆರೋಗ್ಯ ಇಲಾಖೆಯ ದಾಳಿ​ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಹೋಟೆಲ್​ ಲಲಿತ್ ಅಶೋಕ್​
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿನ 3 ಹಾಗೂ ಫೈವ್​ ಸ್ಟಾರ್ ಹೋಟೆಲ್​ಗಳಲ್ಲಿ ದಾಳಿ
  • ಲಲಿತ್ ಅಶೋಕ್ ಹೋಟೆಲ್​ನಲ್ಲಿ ಕೆಜಿಗಟ್ಟಲೇ ಮಾಂಸ, ತರಕಾರಿಗಳು ವಶಕ್ಕೆ
  • ಅಹಾರ ಇಲಾಖೆಯ ರೇಡ್​ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಕಡೆಗೂ ಲಲಿತ್ ಅಶೋಕ್ ಮ್ಯಾನೇಜರ್​​
ಬೆಂಗಳೂರು: ಕಳೆದ ಎರಡು ದಿನಗಳಿಂದ ನಗರದ ಫೈವ್ ಸ್ಟಾರ್​ ಹೋಟೆಲ್​ಗಳಲ್ಲಿ ಆಹಾರ ಇಲಾಖೆ ನಡೆಸಿದ ಪರಿಶೀಲನೆ ಹಿನ್ನೆಲೆ ತಮ್ಮ ರೆಸ್ಟೋರೆಂಟ್​ನಿಂದ ಮಾಂಸ, ತರಕಾರಿ ಮತ್ತು ಅವಧಿ ಮೀರಿದ ಹಾಲು ವಶಪಡಿಸಿಕೊಂಡ ಬಗ್ಗೆ ಕಡೆಗೂ ಲಲಿತ್ ಅಶೋಕ್ ಮ್ಯಾನೇಜರ್​​ ಮೌನ ಮುರಿದಿದ್ದಾರೆ.
ಮಾಂಸ, ತರಕಾರಿ ಹಾಗೂ ಹಾಲು ಸೇರಿದಂತೆ ಫ್ರೋಜನ್ ಆಹಾರ ಪದಾರ್ಥಗಳು ಇನ್ನೂ ಕೆಟ್ಟಿರಲಿಲ್ಲ. ಕೊಳೆತ ಮಾಂಸ ಎನ್ನಲಾದ ಆರೋಪ ಸುಳ್ಳು. ಅವುಗಳ ಸಂಗ್ರಹಣೆ ಮತ್ತು ಪ್ರತ್ಯೇಕವಾಗಿ ಕಾಪಾಡಿಕೊಳ್ಳುವ ವಿಧಾನಕ್ಕೆ ಸಂಬಂಧಿಸಿದಂತೆ ಮಾತ್ರ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಶಕ್ಕೆ ಪಡೆದಿರುವ ಆಹಾರಗಳು ಕೆಟ್ಟಿದ್ದೇ ಆಗಲಿ ಅಥವಾ ತಿನ್ನಲು ಯೋಗ್ಯವಲ್ಲದ ಆಹಾರವೇನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು, ಅವಧಿ ಮೀರಿದೆ ಎನ್ನಲಾದ ಹಾಲು ‘Best Before’ ದಿನಾಂಕಕ್ಕಿಂತ ಒಂದು ದಿನ ಮೀರಿದ್ದಾಗಿದೆ. ಅದನ್ನು ರೇಡ್​ಗೂ ಮೊದಲೇ ನಾವು ಬಳಕೆಯಿಂದ ಹಿಂಪಡೆಯಲು ಗುರುತಿಸಿದ್ದೆವು. ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅಧಿಕಾರಿಗಳ ಸೂಚನೆಗಳ ಆಧಾರದ ಮೇಲೆ ಸಂಗ್ರಹಣೆ, ಉತ್ಪನ್ನಗಳ ದಿನಾಂಕ ಪರಿಶೀಲನಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಿದ್ದೇವೆ ಎಂದು ಮ್ಯಾನೇಜರ್​ ಹೇಳಿದ್ದಾರೆ.
ನಮ್ಮ ಹೋಟೆಲ್​ಗೆ ಆಗಮಿಸುವ ಅತಿಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮವು ನಮ್ಮ ಮೊದಲ ಆದ್ಯತೆಯಾಗಿಯೇ ಉಳಿದಿದೆ. ಆಹಾರ ಸುರಕ್ಷತೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಯ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಒತ್ತಿ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net