ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್; ಕೈಯಾರೆ ಕಸ ತೆಗೆದ ಪೊಲೀಸರಿಗೆ ನೆಟ್ಟಿಗರಿಂದ ಭಾರೀ ಭೇಷ್! | Bengaluru Traffic Police
ಡ್ರೈನೇಜ್ ಪೈಪ್ನ ಕಸ ತೆಗೆದ ಟ್ರಾಫಿಕ್ ಪೊಲೀಸ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭಾರಿ ಮಳೆಗೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಜಲಾವೃತ
ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ಪರದಾಟ
ಡ್ರೈನೇಜ್ ಪೈಪ್ನಲ್ಲಿದ್ದ ಕಸ-ಹೂಳು ತೆಗೆದ ಟ್ರಾಫಿಕ್ ಪೊಲೀಸ್
Bengaluru Traffic Police: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದ್ರೆ ಸಾಕು, ರಸ್ತೆಗಳು ಕೆರೆಯಂತಾಗೋದು ಸಾಮಾನ್ಯ. ನಗರದ ಹಲವೆಡೆ ಸುರಿದ ಭಾರಿ ಮಳೆಗೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಕೂಡ ಜಲಾವೃತವಾಗಿತ್ತು. ಫ್ಲೈಓವರ್ನ ಒಂದು ಭಾಗದಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಗಿತ್ತು.
ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲೇ ನಿಂತಿದ್ದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿತ್ತು. ಈ ವೇಳೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಬಸಪ್ಪ ಅವರು ಸ್ಥಳದಲ್ಲೇ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ.
ಕೈಯಾರೆ ಕಸ ತೆಗೆದ ಟ್ರಾಫಿಕ್ ಪೊಲೀಸ್
ಡ್ರೈನೇಜ್ ಪೈಪ್ಗೆ ಕಸ-ಹೂಳು ಸಿಲುಕಿದ್ದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಬಸಪ್ಪ, ತಡಮಾಡದೆ ತಾವೇ ಕೈಯಾರೆ ಕಸ ತೆರವುಗೊಳಿಸಿದ್ದಾರೆ. ಪೈಪ್ನಲ್ಲಿದ್ದ ಕಸವನ್ನು ಹೊರತೆಗೆದು, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದ್ದಾರೆ.
ಪೊಲೀಸ್ ಕಾರ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ
ಬಸಪ್ಪ ಅವರು ಡ್ರೈನೇಜ್ ಸ್ವಚ್ಛಗೊಳಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ಟ್ರಾಫಿಕ್ ನಿಯಂತ್ರಣದ ಜೊತೆಗೆ ಸ್ಥಳದಲ್ಲೇ ಸಮಸ್ಯೆ ಬಗೆಹರಿಸಲು ಮುಂದಾದ ಬಸಪ್ಪ ಅವರ ಕಾರ್ಯಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.