ಸಾಹಸಸಿಂಹ​ ಖ್ಯಾತಿಯ ನಿರ್ದೇಶಕ ಜೋ ಸೈಮನ್​ ಇನ್ನಿಲ್ಲ | Joe Simon

ನಿರ್ದೇಶಕ ಜೋಸೈಮನ್
ನಿರ್ದೇಶಕ ಜೋಸೈಮನ್
Published on

ಪ್ರಮುಖ ಮುಖ್ಯಾಂಶಗಳು

  • ಸಾಹಸಸಿಂಹ ಖ್ಯಾತಿಯ ಜೋ ಸೈಮನ್​ ನಿಧನ
  • ವಿಷ್ಣುವರ್ಧನ್​ಗೆ ಸಾಹಸಸಿಂಹ ಎಂಬ ಬಿರುದನ್ನು ನೀಡಿದ್ದ ನಿರ್ದೇಶಕ
  • ದಶಕಗಳ ಕಾಲ ನಿರ್ದೇಶಕರಾಗಿ ಕೆಲಸ ಮಾಡಿದ್ದ ಜೋ ಸೈಮನ್
ಬೆಂಗಳೂರು: ಸಾಹಸಸಿಂಹ ಮತ್ತು ಏಜೆಂಟ್​ ಅಮರ್​ ಎಂಬ ಸೂಪರ್​ ಹಿಟ್​ ಸಿನಿಮಾಗಳ ನಿರ್ದೇಶಕ ಜೋ ಸೈಮನ್ (Joe Simon) ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಫಿಲ್ಮ್ ಚೇಂಬರ್​ನಲ್ಲಿ ನಡೆಯುತ್ತಿದ್ದ ಕಾರ್ಯಕಾರಿ ಸಭೆಯಲ್ಲಿ ಭಾಗವಿಸಿದ್ದ ಜೋ ಸೈಮನ್, ಸಭೆಯಲ್ಲಿ ಮಾತನಾಡಿದ ಬಳಿಕ, ಶೌಚಾಲಯಕ್ಕೆ ಹೋಗಿದ್ದಾರೆ, ಅಲ್ಲಿ ಅವರು ವಾಂತಿ ಮಾಡಿಕೊಂಡು ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಹತ್ತಿರದ ಮಲ್ಲಿಗೆ ಆಸ್ಪತ್ರೆಗೆ ಸಾಗಿಸಲಾಗಿದೆ ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಮಂಡ್ಯ ಮೂಲದ ಜೋ ಸೈಮನ್ ಆರಂಭದಲ್ಲಿ ಟಚ್ ಅಪ್ ಬಾಯ್, ಸಹಾಯಕ ಮೇಕ್ಅಪ್ ಮ್ಯಾನ್ ಮತ್ತು ಸೆಟ್ ಬಾಯ್ ಆಗಿ ಚಿತ್ರರಂಗವನ್ನು ಪ್ರವೇಶಿಸಿದರು. ನಂತರ ನಿರ್ದೇಶನ ವಿಭಾಗದಲ್ಲಿ ನಿರತರಾದ ಅವರು  ಕೆ.ಎಸ್.ಆರ್.ದಾಸ್, ಆರ್.ಎನ್. ಜಯಗೋಪಾಲ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.

ಸಾಹಸಸಿಂಹ ಬಿರುದು ನೀಡಿದ್ದ ನಿರ್ದೇಶಕ

ಕನ್ನಡ ಚಿತ್ರರಂಗದ ಸಾಹಸಸಿಂಹರೆಂದೇ ಖ್ಯಾತರಾದ ಡಾ. ವಿಷ್ಣುವರ್ಧನ್​ ಜತೆಗೆ ಜೋ ಸೈಮನ್​ ಅತಿ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಅಷ್ಟೇ ಅಲ್ಲದೆ, ವಿಷ್ಣು ಅವರ ಜತೆ 1982 ರಲ್ಲಿ ಸೈಮನ್​ ಸಾಹಸಸಿಂಹ ಎಂಬ ಸಿನಿಮಾ ನಿರ್ದೇಶಿಸಿದ್ದರಿಂದಲೇ ಸಾಹಸಸಿಂಹ ಬಿರುದು ವಿಷ್ಣುವರ್ಧನ್​ ಅವರಿಗೆ ಲಭಿಸಿತ್ತು.

ದಶಕಗಳ ಕಾಲ ನಿರ್ದೇಶಕರಾಗಿ ಕೆಲಸ

ಜೋ ಸೈಮನ್ ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದರು. ಹಲವು ಹಿಟ್ ಸಿನಿಮಾಗಳನ್ನು ನೀಡಿ, ಕನ್ನಡ ಚಿತ್ರರಂಗಕ್ಕೆ ತನ್ನದೇ ಕೊಡುಗೆ ನೀಡಿದ್ದರು.
ಸಹೋದರರ ಸವಾಲ್(1977), ಒಂದು ಪ್ರೇಮದ ಕಥೆ(1977), ಬಂಗಾರದ ಗುಡಿ(1976) ಮೊದಲಾದವು. ಸಾಹಸಸಿಂಹ, ನ್ಯಾಯ ಗೆದ್ದಿತು, ಪ್ರೇಮ ಜಾಲ, ರವಿ ವರ್ಮ, ಊರಿಗೆ ಉಪಕಾರಿ, ನನ್ನ ರೋಷ ನೂರು ವರುಷ, ಪ್ರೇಮ ಜ್ಯೋತಿ, ಒಡೆದ ಹಾಲು, ರಕ್ತ ತಿಲಕ, ಮಹಾ ಪುರುಷ, ಭರತ್, ರಾಜ ಸಿಂಹ, ಹಾಂಗ್‌ಕಾಂಗ್‌ನಲ್ಲಿ ಏಜೆಂಟ್ ಅಮರ್‌, ಸ್ನೇಹದ ಕಡಲಲ್ಲಿ, ಸಮರ ಸಿಂಹ, ವಾಂಟೆಡ್, ಟೈಮ್‌ ಬಾಂಬ್ ಮುಂತಾದ ಸಿನಿಮಾಗಳನ್ನು ಜೋ ಸೈಮನ್ ನಿರ್ದೇಶಿಸಿದ್ದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net